ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಂ.ಎಸ್. ಧೋನಿ ಫೀಲ್ಡ್ಗೆ ಇಳಿದರೆ ಇಡೀ ಕ್ರೀಡಾಂಗಣವೇ ಎದ್ದು ನಿಲ್ಲುತ್ತದೆ. ಬೇರೆ ಟೀಂಗೆ ಸಪೋರ್ಟ್ ಮಾಡೋರು ಕೂಡ ಧೋನಿ ಬಂದಾಗ ಕೂಗೋದು ನಿಲ್ಲಿಸೋದಿಲ್ಲ.
ವರ್ಷಗಳೇ ಕಳೆದರೂ ಧೋನಿ ಹವಾ ಕಡಿಮೆಯಾಗಿಲ್ಲ ಅನ್ನೋ ಮಾತಿಗೆ ಸಾಕ್ಷಿ ಎನ್ನುವಂತೆ ಧೋನಿ ಹೆಸರಿನಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ.
16ನೇ ಆವೃತ್ತಿಯ ಐಪಿಎಲ್ನಲ್ಲಿ ನಡೆದ ಗುಜರಾತ್ ಟೈಟನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಕ್ವಾಲಿಫೈರ್ ಪಂದ್ಯದಲ್ಲಿ ಧೋನಿ ಫೀಲ್ಡ್ಗೆ ಎಂಟ್ರಿ ಆಗುತ್ತಿದ್ದಂತೆಯೇ ಜಿಯೋ ಸಿನಿಮಾದಲ್ಲಿ ದಾಖಲೆಯ 2.5 ಕೋಟಿ ಜನರು ವೀಕ್ಷಣೆ ಮಾಡಿದ್ದಾರೆ.
ಧೋನಿ ಬ್ಯಾಟಿಂಗ್ಗೆ ಬಂದಾಗ 2.5 ಕೋಟಿ ವೀಕ್ಷಕರು ನೋಡುತ್ತಿದ್ದು, ಧೋನಿ ಔಟ್ ಆದ ತಕ್ಷಣ 55 ಲಕ್ಷ ವ್ಯೂವರ್ಸ್ ಮಾತ್ರ ಮ್ಯಾಚ್ ನೋಡಿದ್ದಾರೆ.