VIRAL VIDEO| ರೀಲ್ಸ್‌ ಹುಚ್ಚು ಭಾರೀ ದಂಡ ತೆರಬೇಕಾದೀತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮದುವೆ ಆಗಿರಲಿ, ಬರ್ತ್‌ಡೇ ಪಾರ್ಟಿಗಳಿರಲಿ ಅಥವಾ ಇನ್ಯಾವುದೇ ಕಾರ್ಯಕ್ರಮಗಳಿರಲಿ, ರೀಲ್‌ಗಳನ್ನು ಮಾಡುವುದು ಸಾಮಾನ್ಯವಾಗಿದೆ. ಇದೀಗ ಉತ್ತರ ಪ್ರದೇಶದ ವಧು ಕಾರಿನ ಮೇಲೆ ಕುಳಿತು ಮಾಡಿರುವ ರೀಲ್‌ಗೆ ಭಾರೀ ದಂಡ ಕಟ್ಟಿದ್ದಾಳೆ.

ಪ್ರಯಾಗ್‌ರಾಜ್‌ನ ವಧು ತನ್ನ ಮದುವೆಯ ದಿನದಂದು ಕಾರಿನ ಮುಂಭಾಗ ಮದುವೆಯ ಉಡುಪಿನಲ್ಲಿ ಸುಂದರ ಪೋಸ್ ಕೊಟ್ಟಳು. ಸಾರ್ವಜನಿಕವಾಗಿ ಇಂತಹ ಸಾಹಸಗಳನ್ನು ಮಾಡುವುದು ಕಾನೂನು ಉಲ್ಲಂಘಿಸಿದಂತೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದಂತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಸಂಚಾರ ಪೊಲೀಸರು ನವ ವಧುವಿಗೆ 15 ಸಾವಿರ ರೂ. ದಂಡ ವಿಧಿಸಿದ್ದಾರೆ.

https://www.instagram.com/reel/Csiirrvh8Vr/?utm_source=ig_web_copy_link

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!