ಸ್ಟೈಲಿಷ್ ಆಗಿ ರೆಡಿಯಾಗಿ ಬಂದ ದಲಿತನಿಗೆ ಥಳಿತ, ಶೋಕಿ ಬೇಕಾ ಎಂದು ಹೊಡೆದರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಳ್ಳೆಯ ಶುಭ್ರವಾದ ಬಟ್ಟೆ, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿ ಸ್ಟೈಲಿಶ್ ಆಗಿ ಬಂದ ದಲಿತನನ್ನ ಗುಂಪೊಂದು ಮನಸೋಇಚ್ಛೆ ಥಳಿಸಿದೆ.

ಗುಜರಾತ್‌ನ ಬನಸ್ಕಾಂಥ ಜಿಲ್ಲೆಯಲ್ಲಿ ಘಟನೆ ಸಂಭವಿಸಿದ್ದು, ಇತ್ತೀಚೆಗೆ ನಿನ್ನ ಶೋಕಿಹೆಚ್ಚಾಯ್ತು, ಎಲ್ಲರೂ ಇದ್ದಂತೆ ಇರೋದಕ್ಕೆ ಆಗೋದಿಲ್ವಾ, ಕಣ್ಣು ನೆಲದ ಮೇಲಿರಲಿ, ನಿನ್ನ ಹಾರಾಟ ಜಾಸ್ತಿ ಆಯ್ತು ಎಂದು ಹೇಳುತ್ತಾ ಥಳಿಸಿದ್ದು, ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಇದೇ ಏಳು ಜನರ ಗುಂಪು ಗ್ರಾಮದ ದೇವಸ್ಥಾನದ ಎದುರು ಇದೇ ರೀತಿ ಉತ್ತಮ ಬಟ್ಟೆ ಧರಿಸಿ ನಿಂತಿದ್ದ ವ್ಯಕ್ತಿಯನ್ನೂ ಥಳಿಸಿದ್ದರು. ಅಡ್ಡ ಬಂದ ತಾಯಿಯನ್ನು ಥಳಿಸಿದ್ದಾರೆ. ಆ ವ್ಯಕ್ತಿಗೂ ಶೋಕಿ ಹೆಚ್ಚಾಯ್ತು ಎಂದು ಈ ಗುಂಪು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!