ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾ ರೈಲು ದುರಂತದಲ್ಲಿ 900 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗಳೆಲ್ಲಾ ಗಾಯಾಳುಗಳಿಂದ ತುಂಬಿದ್ದು, ಆಸ್ಪತ್ರೆ ಹೊರವಲಯದಲ್ಲಿಯೂ ಚಿಕಿತ್ಸೆ ನೀಡಲಾಗುತ್ತಿದೆ.
ಈ ಮಧ್ಯೆ ಸಾಕಷ್ಟು ಜನರ ಸ್ಥಿತಿ ಗಂಭೀರವಾಗಿದ್ದು, ರಕ್ತದ ಅಭಾವವಾಗಿದೆ. ಈ ಕಾರಣದಿಂದ ಸ್ಥಳೀಯರು ಆಸ್ಪತ್ರೆ ಮುಂದೆ ಬೀಡುಬಿಟ್ಟಿದ್ದಾರೆ. ನಾವು ರಕ್ತದಾನ ಮಾಡುತ್ತೇವೆ ಜನರ ಪ್ರಾಣ ಉಳಿಸಿ ಎಂದು ಕೂಗಿ ಹೇಳುತ್ತಿದ್ದಾರೆ.
ಮಾನವೀಯತೆಗೆ ಈ ಘಟನೆ ಸಾಕ್ಷಿಯಾಗಿದ್ದು, ಅಪಘಾತದಲ್ಲಿ ನಾವೇ ಗಾಯಗೊಂಡಿದ್ದರೆ? ರಕ್ತಕ್ಕಾಗಿ ವೈದ್ಯರು ಒದ್ದಾಡುವಾಗ ಒಂದು ಬ್ಯಾಗ್ ರಕ್ತ ಸಿಕ್ಕರೆ ಆ ಗಾಯಾಳು ಬದುಕಬಹುದಲ್ಲವಾ? ನಾವು ಮಾಡುವ ಉತ್ತಮ ಕೆಲಸಗಳು ನಮ್ಮನ್ನು ಸಲಹುತ್ತವೆ ಎಂದು ರಕ್ತ ನೀಡಲು ಬಂದ ದಾನಿಗಳು ಹೇಳಿದ್ದಾರೆ.
ವೈದ್ಯರು ಹಾಗೂ ಆರೋಗ್ಯ ಕೇಂದ್ರ ಸಿಬ್ಬಂದಿ ಆಸ್ಪತ್ರೆ ಮುಂದೆ ಕ್ಯೂನಲ್ಲಿ ನಿಂತ ಸ್ಥಳೀಯರಿಂದ ರಕ್ತದಾನ ಪಡೆದು ಗಂಭೀರವಾಗಿ ಗಾಯಗೊಂಡವರನ್ನು ಉಳಿಸುವ ಪ್ರಯತ್ನದಲ್ಲಿದ್ದಾರೆ. ಗಾಯಗೊಂಡವರೆಲ್ಲ ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸೋಣ.