ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆಯಷ್ಟೇ ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಿದ್ದು, ಜನರು ಫುಲ್ ಖುಷಿಯಾಗಿದ್ದರು. ಇದರ ಬೆನ್ನಲ್ಲೇ ರೈತರಿಗೆ ಬಿಗ್ ಶಾಕ್ ಎದುರಾಗಿದ್ದು, ರೈತರಿಗೆ ನೀಡುತ್ತಿದ್ದ ಹಾಲಿನ ಪ್ರೋತ್ಸಾಹ ಧನವನ್ನು ಕಡಿತಗೊಳಿಸಿದೆ. ಬೇಸಿಗೆಯಲ್ಲಿ ಹಸಿರು ಮೇವು ಸಿಗದ ಕಾರಣ ಹಾಲು ಉತ್ಪಾದನೆ ಕಡಿಮೆಯಾಗಿತ್ತು.
ಹಾಗಾಗಿ ರೈತರಿಗೆ ಪ್ರೋತ್ಸಾಹ ಧನ ರೀತಿ ಪ್ರತಿ ಲೀಟರ್‌ಗೆ 2 ರೂಪಾಯಿ 85 ಪೈಸೆ ವಿಶೇಷ ಪ್ರೋತ್ಸಾಹ ಧನ ಘೋಷಣೆ ಮಾಡಲಾಗಿತ್ತು. ಇದೀಗ ಈ ಹಣವನ್ನು 1 ರೂಪಾಯಿ 50 ಪೈಸೆಗೆ ಇಳಿಸಲಾಗಿದೆ.
ಬೇಸಿಗೆ ಮುಗಿಯುತ್ತಾ ಬಂದಿದ್ದು, ಈಗಾಗಲೇ ಮಳೆ ಆರಂಭವಾಗಿದೆ. ಹೀಗಿರುವಾಗ ಹಸಿರು ಮೇವಿನ ಕೊರತೆ ಆಗುವುದಿಲ್ಲ, ಹಾಗಾಗಿ ಹಾಲಿನ ಉತ್ಪಾದನೆಯಲ್ಲಿ ಕೊರತೆ ಆಗುವುದಿಲ್ಲ ಎಂದು ಬಮೂಲ್ ಹೇಳಿದ್ದು, ಏಕಾಏಕಿ ಪ್ರೋತ್ಸಾಹ ಧನ ಕಡಿಮೆ ಮಾಡಿದ್ದು ರೈತರಿಗೆ ನಿರಾಸೆ ಮೂಡಿಸಿದೆ.