ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಂಧ್ ನದಿಗೆ ವಾಹನ ಉರುಳಿ ಎಂಟು ಸಿಆರ್ಪಿಎಫ್ ಸಿಬ್ಬಂದಿ ಗಾಯಗೊಂಡಿರುವ ಘಟನೆ ಸೋನ್ಮಾರಾಗ್ನ ನೀಲ್ಗ್ರಾಹ್ ಬಾಲ್ಟಾಲ್ ಬಳಿ ನಡೆದಿದೆ.
ಸಿಆರ್ಪಿಎಫ್ ವಾಹನವು ಬಲ್ಟಾಲ್ಗೆ ತೆರಳುತ್ತಿದ್ದ ವೇಳೆ ವಾಹನವು ನದಿಗೆ ಉರುಳಿದೆ. ಈ ವೇಳೆ ಸಿಆರ್ಪಿಎಫ್ ಮತ್ತು ಜಮ್ಮು ಕಾಶ್ಮೀರದ ಪೊಲೀಸರು ಸ್ಥಳಕ್ಕೆ ಆಗಮಿಸಿ ರಕ್ಷಿಸಿದ್ದಾರೆ. ಆದರೆ ದುರದೃಷ್ಟವಶಾತ್, ಅಪಘಾತದ ವೇಳೆ ಎಂಟು ಮಂದಿ ಸಿಆರ್ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಬಗ್ಗೆ ಇನ್ನಷ್ಟು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.