RECIPE| ನಿಂಬೆ ಹಣ್ಣಿನಿಂದ ಸಾಂಬಾರ್‌ ಮಾಡ್ಬೋದು ಅಂತ ಗೊತ್ತಿತ್ತಾ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಿಂಬೆ ಹಣ್ಣನ್ನು ಅನೇಕ ಅಡುಗೆಗಳಿಗೆ ಬಳಸೋದು ತಿಳಿಸಿದೆ. ಆದರೆ ನಿಂಬೆ ಹಣ್ಣಿನಿಂದ ಸಾಂಬಾರ್‌ ಮಾಡ್ಬೋದು ಅನ್ನೋದು ನಿಮಗೆ ಗೊತ್ತಿತ್ತಾ? ಇಲ್ಲಾಂದ್ರೆ ಈಗಲೇ ಟ್ರೈ ಮಾಡಿ ನಿಂಬೆ ಹಣ್ಣಿನ ಸಾಂಬಾರು.

ಬೇಕಾಗುವ ಸಾಮಾಗ್ರಿಗಳು:

* ಬೇಳೆ * ಹಸಿಮೆಣಸು * ಬೆಳ್ಳುಳ್ಳಿ * ಶುಂಠಿ * ಕೊತ್ತಂಬರಿ ಸೊಪ್ಪು * ಕರಿಬೇವಿನ ಎಲೆ * ನಿಂಬೆಹಣ್ಣು * ಕರಿಮೆಣಸು ಬೀಜ * ಅರಿಶಿಣ * ಸಾಸಿವೆ * ಜೀರಿಗೆ * ಎಣ್ಣೆ ಅಥವಾ ತುಪ್ಪ * ಉಪ್ಪು

ಮಾಡುವ ವಿಧಾನ:

* ಮೊದಲು ಬೇಳೆಯನ್ನು ಚೆನ್ನಾಗಿ ತೊಳೆದು ಸ್ವಲ್ಪ ಅರಿಶಿಣ ಹಾಕಿ ಜೊತೆಗೆ ನೀರು ಹಾಕಿ ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿ.
* ಈಗ ಬೆಂದ ಬೇಳೆಯನ್ನು ಸ್ಮ್ಯಾಶ್‌ ಮಾಡಿ 5 ನಿಮಿಷ ಬಿಡಿ.
* ಒಂದು ಪಾತ್ರೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ಎಣ್ಣೆ ಅಥವಾ ತುಪ್ಪ ಹಾಕಬೇಕು. ಎಣ್ಣೆ ಬಿಸಿಯಾದ ಮೇಲೆ, ಸಾಸಿವೆ, ಜೀರಿಗೆ, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸಿನ ಕಾಯಿ, ಕರಿಬೇವಿನ ಎಲೆ, ಪುಡಿಮಾಡಿದ ಕರಿಮೆಣಸು ಮತ್ತು ಹಸಿಮೆಣಸಿನ ಕಾಯಿ ಹಾಕಿ ಫ್ರೈ ಮಾಡಿʼ
* ಈಗ ಬೇಯಿಸಿದ ಬೇಳೆಯನ್ನು ಈ ಮಿಶ್ರಣಕ್ಕೆ ಮೆಲ್ಲನೆ ಸುರಿಯಬೇಕು. ನಂತರ ಬೇಯಿಸಬೇಕು. ಈಗ ರುಚಿಗೆ ತಕ್ಕ ಉಪ್ಪು ಹಾಕಿ ರಸವನ್ನು ಚೆನ್ನಾಗಿ ಕುದಿಸಬೇಕು. ಈಗ ಸಾರಿಗೆ ನಿಂಬೆರಸ ಹಿಂಡಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಅನ್ನದ ಜೊತೆಗೆ ರುಚಿಕರವಾದ ನಿಂಬೆ ಸಾರು ಸವಿಯಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!