ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಗಾಲ್ಯಾಂಡ್‌ನ ಸಚಿವ ತೆಮ್ಜೆನ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಜೊತೆಗೆ ಆಸಕ್ತಿದಾಯಕ ವೀಡಿಯೊಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ. ಇದೀಗ ಕ್ರಿಯೇಟಿವಿಟಿಯೊಂದಕ್ಕೆ ಉದಾಹರಣೆಯಾಗಿರುವ ವಿಡಿಯೋಗೆ ವಾಟ್ ಆನ್ ಐಡಿಯಾ ಸರ್ ಜಿ ಅಂತಿದಾರೆ ನೋಡುಗರು.
ಭಾರತದಲ್ಲಿ ಜನಸಾಮಾನ್ಯರು ಮಾಡುವ ಕೆಲಸಗಳು, ಯೋಜನೆಗಳನ್ನು ನೋಡಿದರೆ ಇಂಜಿನಿಯರಿಂಗ್ ನಲ್ಲಿ ಪಿಎಚ್ ಡಿ ಮಾಡಿದವರು ಏನೇನೂ ಅಲ್ಲ ಅನಿಸುತ್ತದೆ. ಬಿದಿರಿನಿಂದ ವಾಶ್ ಬೇಸಿನ್ ತಯಾರಿಸಿದ್ದು, ಇದನ್ನು ಒಬ್ಬಿಬ್ಬರು ಅಲ್ಲ ಇಡೀ ಹಳ್ಳಿಯವರೇ ಬಳಸುತ್ತಾರೆ. ಬಿದಿರಿನ ಪೈಪುಗಳ ಮೂಲಕ ನೀರು ಹರಿಸಿ, ಬಿದಿರಿನ ಕೊಳವೆಗಳಲ್ಲಿ ಸರಣಿ ರಂಧ್ರಗಳನ್ನು ಕೊರೆದು ನಿಲ್ಲಿಸುವ ಯಂತ್ರಗಳನ್ನೂ ಸಹ ಅಳವಡಿಸಲಾಗಿದೆ. ಬಿದಿರಿನ ಕೋಲುಗಳನ್ನು ನೀರು ನಿಲ್ಲಿಸಲು ಬಳಸಲಾಗುತ್ತದೆ. ಪ್ರತಿ ಬೇಸಿನ್ ಬಳಿ ಸೋಪ್ ಮತ್ತು ಟವೆಲ್ ಸಹ ಲಭ್ಯವಿದೆ.
ನೈಸರ್ಗಿಕ ಬಿದಿರು ವಾಶ್ ಬೇಸಿನ್‌ಗೆ ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಫ್ಲಾಟ್ ಆಗಿದ್ದಾರೆ. ಗ್ರಾಮಸ್ಥರ ಸೃಜನಶೀಲತೆಗೆ ಮೆಚ್ಚುಗೆ ಸೂಚಿಸಿದ್ದು, “ನೀವು ಎಂದಾದರೂ ಇಂತಹದನ್ನು ನೋಡಿದ್ದೀರಾ?” ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಈ ಗ್ರಾಮಸ್ಥರದ್ದು ಎಂತಹ ಐಡಿಯಾ ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.
देखा है कहीं ऐसा?
🎥: ontheground.with.sai pic.twitter.com/SxBzMzgEjv
— Temjen Imna Along (@AlongImna) August 10, 2023