ಬೈಕ್ ಕಳ್ಳತನ ಆರೋಪಿಗಳ ಬಂಧನ: ಸಿಬ್ಬಂದಿಗಳ ಕಾರ್ಯಕ್ಕೆ ಪೊಲೀಸ್‌ ಅಧೀಕ್ಷಕರಿಂದ ‌ಶ್ಲಾಘನೆ

ಹೊಸದಿಗಂತ ವರದಿ ಬಳ್ಳಾರಿ:

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೈಕ್‌ ಗಳನ್ನು ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರ ಕಾರ್ಯವೈಖರಿಗೆ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

ನಾನಾ ಕಡೆ ವಿವಿಧ ಕಂಪನಿಯ ಬೈಕ್ ಗಳನ್ನು ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸಲಾಗಿದೆ. ಅಸ್ಲಾಂ ಬಂಧಿತ ಆರೋಪಿ. ಆತನಿಂದ ಸುಮಾರು 12‌ ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಯನ್ನು ವಿಚಾರಣೆ ನಡೆಸಿದಾಗ ಬಳ್ಳಾರಿ, ರಾಯಚೂರು, ವಿಜಯನಗರ, ಚಿತ್ರದುರ್ಗ, ಧಾರವಾಡ ಜಿಲ್ಲೆಗಳಲ್ಲಿ ಬೈಕ್ ಗಳನ್ನು ಕಳ್ಳತನ ಮಾಡಿರುವುದು ಬಯಲಾಗಿದೆ. ವಿವಿಧ ಕಂಪನಿಯ 6 ಲಕ್ಷ ರೂ. ಮೌಲ್ಯದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ರಂಜಿತ್ ಕುಮಾರ್ ಬಂಡಾರು ಅವರು ತಿಳಿಸಿದ್ದಾರೆ.

ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಮೀರ್ ತಂದೆ ಲಾಲ್ ಸಾಬ್ ಅವರು ನೀಡಿದ ದೂರಿನ ಮೇರೆಗೆ ಸಿರುಗುಪ್ಪ ಉಪ ವಿಭಾಗ ಡಿವೈಎಸ್ ಪಿ ವೆಂಕಟೇಶ್ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ತಂಡದಲ್ಲಿ ಬಳ್ಳಾರಿ ಪಿಐ ಎನ್. ಸತೀಶ್, ಪಿಎಸ್ ಐ ಸಂತೋಷ್ ಡಬ್ಬಿನ್, ಪಿಎಸ್ ಐ ತ್ಯಾಗರಾಜನ್, ಗ್ರಾಮೀಣ ಠಾಣೆ, ಸಿಬ್ಬಂದಿಗಳಾದ ಎಎಸ್ ಐ ನವಾಬ್ ಎಚ್ ಸಿ ಖಾಜಾ ಮೋಯಿನುದ್ದಿನ್, ಶ್ರೀನಿವಾಸ, ಹೆಚ್ ಸಿ ಸುಧಾಕರ್, ಹೆಚ್ ಸಿ ಕೆ.ಬೀರಪ್ಪ, ಹೆಚ್ ಸಿ ಶರಣಪ್ಪ, ಪಿ.ಸಿ. ರಮೇಶ್ ಬಾಬು, ಪಿ.ಸಿ ಮಾರ್ಕ್, ಮಂಜುನಾಥ್ ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಆ.10 ರಂದು ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ಸಿಬ್ಬಂದಿಗಳ ಕಾರ್ಯವೈಖರಿಗೆ ಪೊಲೀಸ್ ಅಧೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!