HEALTH| ರಾತ್ರಿ ಹೊತ್ತು ಹಲ್ಲು ನೋವು ಕಾಣಿಸಿಕೊಂಡ್ರೆ ಹೀಗೆ ಮಾಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಾಮಾನ್ಯವಾಗಿ ಹಲ್ಲಿನ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಒಮ್ಮೆಲೆ ರಾತ್ರಿ ಹೊತ್ತು ನೋವು ಕಾಣಿಸಿಕೊಳ್ಳುವ ಸಂಭವಗಳು ಎದುರಾಗುತ್ತವೆ. ಅಂತಹ ಸಂದರ್ಭಗಳಲ್ಲಿ ನೋವಿನ ಶಮನಕ್ಕಾಗಿ ಹೀಗೆ ಮಾಡಿ.

1. ಸಾಮಾನ್ಯವಾಗಿ ನೋವು ನಿವಾರಕ ಔಷಧಿಗಳನ್ನು ತೆಗೆದುಕೊಳ್ಳಬಹುದು. ಆದರೆ ದಂತವೈದ್ಯರ ಸಲಹೆ ಪಡೆದು ಇಂಥ ನೋವು ನಿವಾರಕ ಮಾತ್ರೆಗಳನ್ನು ಮನೆಯಲ್ಲಿ ಇಟ್ಟುಕೊಳ್ಳಿ, ಅಗ್ಯತ ಬಿದ್ದಾಗ ಬಳಸಬಹುದು.

2.ಕೋಲ್ಡ್ ಕಂಪ್ರೆಸ್ ಅನ್ನು ಬಳಸುವುದು ಹಲ್ಲುನೋವಿನ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮುಖ ಅಥವಾ ದವಡೆಯ ನೋವಿರುವ ಭಾಗಕ್ಕೆ ಟವೆಲ್‌ನಲ್ಲಿ ಸುತ್ತಿದ ಐಸ್‌ನ ಪ್ಯಾಕ್‌ ಇಡುವುದರಿಂದ ಆ ಪ್ರದೇಶದಲ್ಲಿನ ರಕ್ತನಾಳಗಳನ್ನು ಸಂಕುಚಿತಗೊಳಿಸಲು ಸಹಾಯ ಮಾಡುತ್ತದೆ, ಇದು ನೋವನ್ನು ಕಡಿಮೆ ಮಾಡಿ, ಹಾಯಾಗಿ ನಿದ್ರಿಸಲು ಸಹಾಯ ಮಾಡುತ್ತದೆ.

3. ಮಲಗುವಾಗ ತಲೆ ಎತ್ತರವಿಟ್ಟುಕೊಂಡು ಮಲಗಿ ಆಗ ನೋವು ಕಡಿಮೆಯಾಗಬಹುದು.

4. ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು ಹಲ್ಲುನೋವಿಗೆ ಸರಳವಾದ ಮನೆಮದ್ದು.

5. ಪುದೀನಾ ಕಷಾಯದಿಂದ ಬಾಯಿ ಮುಕ್ಕಳಿಸುವುದು ಅಥವಾ ಪುದೀನಾ ಟೀ ಬ್ಯಾಗ್‌ಗಳನ್ನು ಹೀರುವುದು ಹಲ್ಲುನೋವಿನ ತಾತ್ಕಾಲಿಕವಾಗಿ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.

6. ಲವಂಗದಲ್ಲಿರುವ ಪ್ರಮುಖ ಸಂಯುಕ್ತಗಳಲ್ಲಿ ಒಂದಾದ ಯುಜೆನಾಲ್ ಹಲ್ಲಿನ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!