CINE | ನ್ಯೂಯಾರ್ಕ್‌ನಲ್ಲಿ ಸೀರೆಯುಟ್ಟು ಫೋಟೊಸ್‌ಗೆ ಪೋಸ್ ನೀಡಿದ ಸಮಂತಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಸಮಂತಾ ಹಾಗೂ ವಿಜಯ್ ದೇವರಕೊಂಡ ಅಭಿನಯದ ಖುಷಿ ಇನ್ನೇನು ಸದ್ಯದಲ್ಲೇ ತೆರೆಕಾಣಲಿದೆ.

ನಟಿ ಸಮಂತಾ ಅವರು ಸದ್ಯ ಅಮೆರಿಕದಲ್ಲಿದ್ದಾರೆ. ನ್ಯೂಯಾರ್ಕ್​​ಗೆ ತೆರಳಿರುವ ಬಗ್ಗೆ ಅವರು ಇತ್ತೀಚೆಗೆ ಮಾಹಿತಿ ಹಂಚಿಕೊಂಡಿದ್ದರು. ವಿವಿಧ ಬಗೆಯ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾ ಇದ್ದಾರೆ. ಈಗ ಅವರು ಸೀರೆ ಉಟ್ಟು ಮಿಂಚಿದ್ದಾರೆ.ಸಿನಿಮಾ ಪಬ್ಲಿಸಿಟಿ ನೀಡಿದ ನಂತರ ಇದೀಗ ಸಮಂತಾ ರಿಲ್ಯಾಕ್ಸ್ ಮೋಡ್‌ಗೆ ಜಾರಿದ್ದಾರೆ. ಸಮಂತಾ ನ್ಯೂಯಾರ್ಕ್‌ಗೆ ತೆರಳಿದ್ದು, ಸೀರೆಯುಟ್ಟು ಪೋಸ್ ನೀಡಿದ್ದಾರೆ.

ಇಂಗ್ಲಿಷ್​ ‘ಸಿಟಾಡೆಲ್​’ನ ಭಾರತದ ವರ್ಷನ್​ನಲ್ಲಿ ಸಮಂತಾ ನಟಿಸುತ್ತಿದ್ದಾರೆ. ಈ ವೆಬ್ ಸೀರಿಸ್​ನ ಶೂಟಿಂಗ್ ಪೂರ್ಣಗೊಂಡಿದೆ ಎಂದು ತಿಳಿದು ಬಂದಿದೆ. ಈ ಸೀರಿಸ್ ಬಗ್ಗೆ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ.ಕಪ್ಪು ಎಂಬ್ರಾಯ್ಡ್ರಿ ಸೀರೆ ಉಟ್ಟು ನ್ಯೂಯಾರ್ಕ್‌ನ ಬೀದಿ ಬೀದಿ ಸುತ್ತಿದ್ದಾರೆ. ಈ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಸಮಂತಾ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!