Tuesday, October 3, 2023

Latest Posts

ಬ್ರಿಕ್ಸ್ ಶೃಂಗಸಭೆ: ಜೋಹಾನ್ಸ್‌ಬರ್ಗ್‌ನಾದ್ಯಂತ ಡಿಜಿಟಲ್ ಸ್ಕ್ರೀನ್‌ಗಳಲ್ಲಿ ಮೋದಿ ಮಿಂಚಿಂಗ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆಗಸ್ಟ್ 22-24 ರವರೆಗೆ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ 15ನೇ ಬ್ರಿಕ್ಸ್ ಶೃಂಗಸಭೆ ನಡೆಯಲಿದೆ. ಈ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲು ದಕ್ಷಿಣ ಆಫ್ರಿಕಾದತ್ತ ಪ್ರಯಾಣಿಸಿದ್ದು, ಈಗಾಗಲೇ ಅಲ್ಲಿ ಮೋದಿ ಮೇನಿಯಾ ಶುರುವಾಗಿದೆ.

ಇಂದಿನಿಂದ ಶುರುವಾಗಿರುವ ಬ್ರಿಕ್ಸ್ ಶೃಂಗಸಭೆ ಬಗ್ಗೆ ಮಾಹಿತಿ ನೀಡಲಾಗುತ್ತಿದ್ದು, ಅದಕ್ಕಾಗಿ ಡಿಜಿಟಲ್‌ ಸ್ಕ್ರೀನ್‌ಗಳನ್ನು ಅಳವಡಿಸಿಲಾಗಿದೆ. ಮುಖ್ಯವಾಗಿ ಜೋಹಾನ್ಸ್‌ಬರ್ಗ್‌ನ ಕನ್ವೆನ್ಷನ್ ಸೆಂಟರ್ ಬಳಿ ಪ್ರಧಾನಿ ನರೇಂದ್ರ ಮೋದಿಯವರನ್ನು ತೋರಿಸುವ ಡಿಜಿಟಲ್ ಸ್ಕ್ರೀನ್‌ ಹಾಕಲಾಗಿದೆ.

ಅಲ್ಲಷ್ಟೇ ಅಲ್ಲದೆ, ಜೋಹಾನ್ಸ್‌ಬರ್ಗ್‌ನಾದ್ಯಂತ ಸುಮಾರು 10 ಅಂತಹ ಪರದೆಗಳನ್ನು ಇರಿಸಲಾಗಿದೆ ಎಂಬ ಮಾಹಿತಿ ಇದೆ. ಐದು ರಾಷ್ಟ್ರಗಳ ಪ್ರಧಾನಿಗಳೂ ಭಾಗುಯಾದರೂ ಅಲ್ಲಿನ ಡಿಜಿಟಲ್‌ ಸ್ಕ್ರೀನ್‌ಗಳಲ್ಲಿ ಮೋದಿಯವರನ್ನು ಹೆಸರಿಸುವುದು ಪ್ರಧಾನಿ ಮೋದಿಯವರ ಜನಪ್ರಿಯತೆ ಎಷ್ಟಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!