ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-3 ಭರ್ಜರಿ ಯಶಸ್ಸು ಗಳಿಸಿದೆ. ಸಾಫ್ಟ್ ಲ್ಯಾಂಡಿಂಗ್ ಆಗುತ್ತಿದ್ದಂತೆ ದೇಶವೇ ಸಂಭ್ರಮಿಸಿದೆ.
ಇದರ ಬೆನ್ನಲ್ಲೇ ಚಂದ್ರಯಾನ-3 ಮಿಷನ್ ಮೊದಲ ಸಂದೇಶ ಕಳುಹಿಸಿದ್ದು, ಇಸ್ರೋ ಈ ರೀತಿಯಾಗಿ ಹೇಳಿಕೊಂಡಿದೆ.
‘ಭಾರತ.. ನಾನು ನನ್ನ ಗುರಿಯನ್ನು ತಲುಪಿದೆ ಮತ್ತು ನೀವು ಕೂಡ..’ ಎಂದು ಚಂದ್ರಯಾನ-3 ಸಂದೇಶವನ್ನು ರವಾನಿಸಿದೆ. ಈ ಕುರಿತು ಇಸ್ರೋ ತನ್ನ ಎಕ್ಸ್ನಲ್ಲಿ ಹೇಳಿಕೊಂಡಿದೆ.
Chandrayaan-3 Mission:
'India🇮🇳,
I reached my destination
and you too!'
: Chandrayaan-3Chandrayaan-3 has successfully
soft-landed on the moon 🌖!.Congratulations, India🇮🇳!#Chandrayaan_3#Ch3
— ISRO (@isro) August 23, 2023
ಅತ್ಯಂತ ನಿರೀಕ್ಷೆಯ, ರೋಚಕ ಅನುಭವದ ಚಂದ್ರಯಾನ-3 ಪೂರ್ವ ನಿಗದಿಯಂತೆ ಸರಿಯಾಗಿ 6.03 ನಿಮಿಷಕ್ಕೆ ಸಾಫ್ಟ್ ಲ್ಯಾಂಡ್ ಆಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಲೈವ್ನಲ್ಲಿ ವೀಕ್ಷಣೆ ಮಾಡಿ ಹುರಿದುಂಬಿಸಿದರು.