ನಾನು ನನ್ನ ಗುರಿಯನ್ನು ತಲುಪಿದೆ…ನೀವು ಕೂಡ: ಚಂದ್ರಯಾನ-3 ಯಿಂದ ಬಂತು ಮೊದಲ ಸಂದೇಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-3 ಭರ್ಜರಿ ಯಶಸ್ಸು ಗಳಿಸಿದೆ. ಸಾಫ್ಟ್ ಲ್ಯಾಂಡಿಂಗ್ ಆಗುತ್ತಿದ್ದಂತೆ ದೇಶವೇ ಸಂಭ್ರಮಿಸಿದೆ.

ಇದರ ಬೆನ್ನಲ್ಲೇ ಚಂದ್ರಯಾನ-3 ಮಿಷನ್ ಮೊದಲ ಸಂದೇಶ ಕಳುಹಿಸಿದ್ದು, ಇಸ್ರೋ ಈ ರೀತಿಯಾಗಿ ಹೇಳಿಕೊಂಡಿದೆ.

‘ಭಾರತ.. ನಾನು ನನ್ನ ಗುರಿಯನ್ನು ತಲುಪಿದೆ ಮತ್ತು ನೀವು ಕೂಡ..’ ಎಂದು ಚಂದ್ರಯಾನ-3 ಸಂದೇಶವನ್ನು ರವಾನಿಸಿದೆ. ಈ ಕುರಿತು ಇಸ್ರೋ ತನ್ನ ಎಕ್ಸ್​ನಲ್ಲಿ ಹೇಳಿಕೊಂಡಿದೆ.

ಅತ್ಯಂತ ನಿರೀಕ್ಷೆಯ, ರೋಚಕ ಅನುಭವದ ಚಂದ್ರಯಾನ-3 ಪೂರ್ವ ನಿಗದಿಯಂತೆ ಸರಿಯಾಗಿ 6.03 ನಿಮಿಷಕ್ಕೆ ಸಾಫ್ಟ್ ಲ್ಯಾಂಡ್ ಆಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಲೈವ್​ನಲ್ಲಿ ವೀಕ್ಷಣೆ ಮಾಡಿ ಹುರಿದುಂಬಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!