ಚಂದ್ರಯಾನ-3 ಯಶಸ್ಸು: ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಗೆ ಪ್ರಧಾನಿ ಮೋದಿ ಕರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಂದ್ರಯಾನ-3 ಯಶಸ್ವಿಯಾಗಿದ್ದು, ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್‌ ಸಾಫ್ಟ್ ಲ್ಯಾಂಡ್ ಆಗುವ ಮೂಲಕ ಭಾರತ ಹೊಸ ದಾಖಲೆಯೊಂದನ್ನು ಬರೆದಿದೆ.

ಇದೇ ವೇಳೆ ಫೋನ್‌ ಮಾಡಿ ಅಭಿನಂದನೆ ತಿಳಿಸಿದ ಪ್ರಧಾನಿ ಮೋದಿ, ಎಸ್. ಸೋಮನಾಥನ್‌ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಜೊತೆಗೆ ಇಸ್ರೋ ಟೀಮ್ ಗೂ ತಮ್ಮ ಶುಭಾಶಯ ತಿಳಿಸಲು ಸೂಚಿಸಿದರು. ಆದಷ್ಟು ಬೇಗ ನಿಮೆಲ್ಲರನ್ನು ಭೇಟಿ ಮಾಡುತ್ತೇನೆ ಎಂದು ಕರೆಯಲ್ಲಿ ಪ್ರಧಾನಿ ಮೋದಿ ಹೇಳಿದರು.

ಎಸ್ ಸೋಮನಾಥ್ ಅವರೊಂದಿಗೆ ಮಾತನಾಡಿದ ಅವರು ಸೋಮನಾಥ್ ಅವರೇ ನಿಮ್ಮ ಹೆಸರಿನಲ್ಲೇ ಶಶಿ ಎಂದು ಇದೆ. ಇದೀಗ ನೀವು ಕೂಡ ಚಂದ್ರನೊಂದಿಗೆ ಜತೆಗೆ ಸೇರಿಕೊಂಡಿದ್ದೀರಾ. ಇದರ ಜತೆಗೆ ಭಾರತೀಯರು ಕೂಡ ಚಂದ್ರನೊಂದಿಗೆ ಸಂಪರ್ಕ ಸಾಧಿಸಿದಂತಾಗಿದೆ. ನಿಮ್ಮ ಈ ಕಾರ್ಯಕ್ಕೆ ಕುಟುಂಬದ ಸದಸ್ಯರೂ ಹರ್ಷಿತರಾಗುತ್ತಾರೆ. ನಿಮಗೂ ಮತ್ತು ನಿಮ್ಮ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು ಎಂದು ತಿಳಿಸಿದ್ದಾರೆ.

ಈ ಐತಿಹಾಸಿಕ ಕ್ಷಣದ ಕುರಿತು ಮಾತನಾಡಿದ ಇಸ್ರೊ ಅಧ್ಯಕ್ಷ ಎಸ್‌. ಸೋಮನಾಥ, ನಮ್ಮ ಪರಿಶ್ರಮಕ್ಕೆ ತಕ್ಕ ಫಲ ದೊರೆದಿದೆ. ಯೋಜನಾ ನಿರ್ದೇಶಕ ವೀರ ಮುತ್ತುವೆಲ್‌ ಅವರ ಪರಿಶ್ರಮ ದೊಡ್ಡದು. ತಂಡದ ಎಲ್ಲರಿಗೂ ಧನ್ಯವಾದಗಳು’ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!