ಕೊಹ್ಲಿ ದಾಖಲೆ ಮುರಿದ ಇಸ್ರೋ: ಚಂದ್ರಯಾನ-3ಗೆ ಎಲ್ಲೆಡೆ ಜಯಘೋಷ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

Chandrayaan-3 ಆಗಸ್ಟ್‌ 23 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡಿಂಗ್ ಆಗಿದ್ದು, ಈ ಮೂಲಕ ಭಾರತ ವಿಶ್ವದಲ್ಲೇ ಹೊಸ ಇತಿಹಾಸವನ್ನೇ ನಿರ್ಮಿಸಿದೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತದ ವಿಕ್ರಮ್‌ ಹಾಗೂ ಪ್ರಗ್ಯಾನ್‌ ರೋವರ್‌ ಹೊರತಾಗಿ ಉಳಿದ ಯಾವ ದೇಶಗಳ ಲ್ಯಾಂಡರ್‌, ರೋವರ್‌ ಕೂಡ ಅಲ್ಲಿಲ್ಲ. ಚಂದ್ರಯಾನ-3ಯ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಲ್ಯಾಂಡ್‌ ಆದ ಬಳಿಕ ಇಸ್ರೋ ತನ್ನ ಅಧಿಕೃತ ಖಾತೆಯಿಂದ ಒಂದು ಟ್ವೀಟ್‌ ಮಾಡಿತ್ತು. ‘ಚಂದ್ರಯಾನ-3 ಮಿಷನ್‌: ಇಂಡಿಯಾ ನಾನು ನನ್ನ ಗಮ್ಯ ಸ್ಥಾನ ತಲುಪಿದ್ದೇನೆ. ಅದರೊಂದಿಗೆ ನೀನೂ ಕೂಡ ಇಲ್ಲಿಗೆ ತಲುಪಿದ್ದೀಯ’ ಚಂದ್ರಯಾನ-3 ಚಂದ್ರನ ಮೇಲೆ ಯಶಸ್ವಿಯಾಗಿ ಸಾಫ್ಟ್‌ ಲ್ಯಾಂಡ್‌ ಆಗಿದೆ, ಅಭಿನಂದನೆಗಳು ಭಾರತ!’ ಎಂದು ಆಗಸ್ಟ್‌ 23ರ ಸಂಜೆ 6 ಗಂಟೆ 4 ನಿಮಿಷಕ್ಕೆ ಟ್ವೀಟ್‌ ಮಾಡಿತ್ತು. ಈಗ ಈ ಟ್ವೀಟ್‌ಗೆ 857.5K ಲೈಕ್ಸ್‌ಗಳು ಪಡೆದಿಕೊಂಡಿದೆ. ಈ ಮೂಲಕ ಇದು ಭಾರತದಿಂದ ಗರಿಷ್ಠ ಲೈಕ್ಸ್‌ ಪಡೆದುಕೊಂಡ ಟ್ವೀಟ್‌ ಆಗಿದೆ.

ಈ ಟ್ವೀಟ್‌ ಎಷ್ಟು ಪಾಪ್ಯುಲರ್‌ ಆಗಿದೆ ಎಂದರೆ, ಇಲ್ಲಿಯವರೆಗೂ 56 ಮಿಲಿಯನ್‌ ವೀವ್ಸ್‌ ಪಡೆದುಕೊಂಡಿದೆ. ಅದರೊಂದಿಗೆ ಭಾರತದಿಂದ ಗರಿಷ್ಠ ಲೈಕ್‌ ಪಡೆದುಕೊಂಡ ಟ್ವೀಟ್‌ ಎನಿಸುವ ಮೂಲಕ ವಿರಾಟ್‌ ಕೊಹ್ಲಿ ಅವರ ಟ್ವೀಟ್‌ ದಾಖಲೆಯನ್ನು ಮುರಿದಿದೆ.

2022ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದ ಬಳಿಕ ವಿರಾಟ್‌ ಕೊಹ್ಲಿ ಮಾಡಿದ್ದ ಟ್ವೀಟ್‌ಗೆ ಈವರೆಗೂ 796.9K ಲೈಕ್ಸ್‌ ಪಡೆದುಕೊಂಡಿದೆ. ವಿರಾಟ್‌ ಕೊಹ್ಲಿ ಈ ಪಂದ್ಯದಲ್ಲಿ ಐತಿಹಾಸಿಕ 82 ರನ್‌ ಬಾರಿಸಿದ್ದರು. ಅದರ ಬೆನ್ನಲ್ಲಿಯೇ, ‘ಸ್ಪೆಷಲ್‌ ಗೆಲುವು. ದಾಖಲೆಯ ಪ್ರಮಾಣದಲ್ಲಿ ಸೇರಿದ್ದ ಎಲ್ಲಾ ನಮ್ಮ ಅಭಿಮಾನಿಗಳಿಗೆ ಥ್ಯಾಂಕ್‌ ಯು’ ಎಂದು ವಿರಾಟ್‌ ಕೊಹ್ಲಿ ಬರೆದಿದ್ದರು.

ವಿರಾಟ್‌ ಕೊಹ್ಲಿ ಅಂದಾಜು ಒಂದು ವರ್ಷ ಹಿಂದೆ ಮಾಡಿರುವ ಟ್ವೀಟ್‌ಗೆ ಅಂದಾಜು 797K ಲೈಕ್ಸ್‌ ಬಂದಿದ್ದದರೆ, ಇಸ್ರೋ ಮಾಡಿರುವ ಟ್ವೀಟ್‌ ಈಗಾಗಲೇ 850K ಗಡಿ ದಾಟಿದ್ದು, ಶೀಘ್ರದಲ್ಲಿಯೇ 1 ಮಿಲಿಯನ್‌ ಗಡಿ ಮುಟ್ಟುವ ಸಾಧ್ಯತೆ ಇದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!