ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾನ್ ಬಿಜೆಪಿಗೆ ಹೋಗೋದು ಅಂದ್ರೆ ಏನ್ ತಮಾಷೆನಾ? ಯಾರಾದ್ರು ನಂಬೋ ಅಂತ ಮಾತಾ ಇದು? ನನ್ನ ಹೆಣಾನೂ ಬಿಜೆಪಿಗೆ ಹೋಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಅಧಿಕಾರಕ್ಕಾಗಿ ಸಿದ್ದರಾಮಯ್ಯ ಬಿಜೆಪಿಗೆ ಹೋಗೋಕೆ ರೆಡಿಯಿದ್ರು ಎಂದು ಜಿ.ಟಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದು, ಇದಕ್ಕೆ ಸಿದ್ದು ತಿರುಗೇಟು ನೀಡಿದ್ದಾರೆ.
ರಾಜಕೀಯ ಅಂದ್ಮೇಲೆ ಯಾವಾಗೋ ಯಾರನ್ನೋ ಭೇಟಿ ಮಾಡಿರ‍್ತೀವಿ, ಅದನ್ನೆಲ್ಲಾ ಪಕ್ಷಕ್ಕೆ ಸೇರ‍್ತಾರೆ ಅಂದ್ರೆ ಹೇಗೆ? ಇತ್ತೀಚೆಗೆ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೆ, ಇದಕ್ಕೇನು ಹೇಳ್ತೀರಿ ಎಂದು ಪ್ರಶ್ನಿಸಿದ್ದಾರೆ.