ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾಕಪ್ನಲ್ಲಿನ ಸೋಲಿನಿಂದ ಕಂಗೆಟ್ಟಿರುವ ಪಾಕಿಸ್ತಾನ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತಂಡದ ಪ್ರಮುಖ ಬೌಲರ್ ನಸೀಮ್ ಶಾ ಏಕದಿನ ವಿಶ್ವಕಪ್ ಟೂರ್ನಿಯಿಂದ ಹೊರಬಿದಿದ್ದಾರೆ .
ಸೋಮವಾರ ಭಾರತದ ವಿರುದ್ಧ ನಡೆದ ಸೂಪರ್-4 ಹಂತದ ಪಂದ್ಯದ ವೇಳೆ ನಸೀಮ್ ಶಾ ಅವರು ಭುಜಕ್ಕೆ ಗಾಯವಾಗಿತ್ತು. ಹೀಗಾಗಿ ಅವರು ಅರ್ಧದಲ್ಲೇ ಮೈದಾನ ತೊರೆದಿದ್ದರು.ಇದೇ ಕಾರಣದಿಂದಾಗಿ ಶ್ರೀಲಂಕಾ ವಿರುದ್ಧದ ನಿರ್ಣಾಯಕ ಪಂದ್ಯದಲ್ಲೂ ಯುವ ವೇಗಿ ಕಾಣಿಸಿಕೊಂಡಿರಲಿಲ್ಲ.
ಇದೀಗ ನಸೀಮ್ ಶಾ ಅವರ ಸ್ಕ್ಯಾನಿಂಗ್ ರಿಪೋರ್ಟ್ ಬಂದಿದ್ದು, ಭುಜದ ಗಾಯವು ನಿರೀಕ್ಷಿಸಿದ್ದಕ್ಕಿಂತ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಅವರು ಹೆಚ್ಚಿನ ವಿಶ್ರಾಂತಿ ಪಡೆದುಕೊಳ್ಳಬೇಕಾಗಿ ಬರಬಹುದು ಎಂದು ಪ್ರಾಥಮಿಕ ವೈದ್ಯಕೀಯ ರಿಪೋರ್ಟ್ ತಿಳಿಸಿದೆ.ಅಂದರೆ ಕನಿಷ್ಠ 2 ತಿಂಗಳುಗಳ ಕಾಲವಾದರೂ ಅವರು ಮೈದಾನದಿಂದ ಹೊರಗುಳಿಯಬೇಕಾಗಿ ಬರಬಹುದು. ಇತ್ತ ಅಕ್ಟೋಬರ್ 5 ರಿಂದ ಏಕದಿನ ವಿಶ್ವಕಪ್ ಶುರುವಾಗಲಿದ್ದು, ಈ ವೇಳೆಗೆ ಅವರು ಚೇತರಿಸಿಕೊಳ್ಳುವುದು ಅನುಮಾನ. ಹೀಗಾಗಿ ನಸೀಮ್ ಶಾ ಇಡೀ ಟೂರ್ನಿಯಿಂದ ಹೊರಗುಳಿಯುವುದು ಬಹುತೇಕ ಖಚಿತ ಎಂದು ವರದಿಯಾಗಿದೆ.