ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಈವರೆಗೂ ಸಾಕಷ್ಟು ಪದಕಗಳನ್ನು ಬಾಚಿಕೊಂಡಿದ್ದು, ಇನ್ನೂ ಪದಕ ಬೇಟೆ ಮುಂದುವರಿದಿದೆ.
ಮಹಿಳೆಯರ ಡಿಂಗಿ ಸೇಲಿಂಗ್ ಸ್ಪರ್ಧೆಯಲ್ಲಿ ಭಾರತದ ನೇಹಾ ಠಾಕೂರ್ ಬೆಳ್ಳಿ ಪದಕ ಗೆದ್ದರೆ, ಪುರುಷರ ವಿಂಡ್ ಸರ್ಫರ್ ವಿಭಾಗದಲ್ಲಿ ಭಾರತದ ಈಬಾದ್ ಅಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.
ನೇಹಾ ಒಟ್ಟಾರೆ 32 ಅಂಕದೊಂದಿಗೆ ಸ್ಪರ್ಧೆ ಮುಗಿಸಿದ್ದಾರೆ. ಥಾಯ್ಲೆಂಡ್‌ನ ನೊಪಾಸ್ಸೋರ್ನ್ ಖುನ್‌ಬೂಂಜಾನ್ ಚಿನ್ನದ ಪದಕ ಗೆದ್ದಿದ್ದು, ಸಿಂಗಾಪುರದ ಕೀರಾ ಮೇರಿ ಕಾರ್ಲೈಲ್ ನೆಟ್‌ಸ್ಕೋರ್ ಕಂಚಿನ ಪದಕ ಗೆದ್ದಿದ್ದಾರೆ.
ಅಲಿ 25 ಪಾಯಿಂಟ್‌ನೊಂದಿಗೆ ಕಂಚಿನ ಪದಕ, ದಕ್ಷಿಣ ಕೊರಿಯಾದ ವೋನ್ವೊ ಚೊ ಚಿನ್ನ ಹಾಗೂ ಥಾಯ್ಲೆಂಡ್‌ನ ನಟ್ಟಾಪೊಂಗ್ ಬೆಳ್ಳಿ ಪದಕ ಪಡೆದಿದ್ದಾರೆ.