ಆಫ್ಘಾನಿಸ್ತಾನವನ್ನು ನಡುಗಿಸುತ್ತಿರುವ ಭೂಕಂಪ, ಫಿಲಿಪೈನ್ಸ್‌ನಲ್ಲೂ ಕಂಪನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಫಿಲಿಪೈನ್ಸ್ ಮತ್ತು ಅಫ್ಘಾನಿಸ್ತಾನ ಎರಡೂ ಕಡೆ ಭೂಕಂಪ ಸಂಭವಿಸಿದೆ. ಫಿಲಿಪೈನ್ಸ್‌ನ ದಕ್ಷಿಣ ಮನಿಲಾ ನಗರದಲ್ಲಿ ಶುಕ್ರವಾರ ಬೆಳಿಗ್ಗೆ 8:24(ಸ್ಥಳೀಯ ಕಾಲಮಾನ)ಕ್ಕೆ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.2ರಷ್ಟು ದಾಖಲಾಗಿರುವುದಾಗಿ ಯುಎಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ.

ಭೂಕಂಪದ ತೀವ್ರತೆಗೆ ಹಲವಾರು ಕಟ್ಟಡಗಳು ಹಾನಿಗೊಳಗಾಗಿದ್ದು, ಸ್ಥಳೀಯರು ಜೀವ ಭಯದಲ್ಲಿದ್ದಾರೆ. ಸದ್ಯ ಯಾವುದೇ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ.

ಮತ್ತೊಂದೆಡೆ, ಇಂದು ಬೆಳಗ್ಗೆ 6.39ಕ್ಕೆ ಅಫ್ಘಾನಿಸ್ತಾನದಲ್ಲಿ 4.6 ತೀವ್ರತೆಯ ಭೂಕಂಪ ಸಂಭವಿಸಿರುವುದಾಗಿ ರಾಷ್ಟ್ರೀಯ ಭೂಕಂಪನ ಮಾಹಿತಿ ಕೇಂದ್ರ ತಿಳಿಸಿದೆ. ಕಳೆದ 15 ದಿನಗಳಿಂದ ಸತತ ಭೂಕಂಪಗಳಿಂದ ಅಫ್ಘಾನಿಸ್ತಾನ ಜನ ತತ್ತರಿಸಿದ್ದಾರೆ. ಇದಕ್ಕೂ ಮೊದಲು ಉಂಟಾದ ಭೂಕಂಪದಲ್ಲಿ 4ಸಾವಿರ ಜನರು ಮೃತಪಟ್ಟಿದ್ದು, ಅನೇಕ ಕಟ್ಟಡಗಳು ನಾಶವಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!