Sunday, December 3, 2023

Latest Posts

ಒತ್ತೆಯಾಳುಗಳು ಬಿಡುಗಡೆಯಾಗುವವರೆಗೂ ಗಾಜಾಕ್ಕೆ ನೀರು, ವಿದ್ಯುತ್ ಇಲ್ಲ: ಇಸ್ರೇಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ಯಾಲೆಸ್ತೀನ್‌ನ ಬಂಡುಕೋರರು ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೂ ಗಾಜಾಕ್ಕೆ ನೀರು, ವಿದ್ಯುತ್ ಮತ್ತಿತರ ಮೂಲಸೌಕರ್ಯಗಳನ್ನು ಒದಗಿಸುವುದಿಲ್ಲ ಎಂದು ಇಸ್ರೇಲ್ ಹೇಳಿದೆ.

ಅಪಹರಣಕ್ಕೊಳಗಾದ ಇಸ್ರೇಲಿಗರು ಸುರಕ್ಷಿತವಾಗಿ ಮನೆಗೆ ತಲುಪಬೇಕು, ಅಲ್ಲಿಯವರೆಗೂ ಗಾಜಾಗೆ ನೀರು, ವಿದ್ಯುತ್, ಇಂಧನ ಟ್ರಕ್ ಪ್ರವೇಶ ಮಾಡುವುದಿಲ್ಲ ಎಂದು ಹೇಳಿದೆ.

ದಶಕಗಳಲ್ಲೇ ಅತಿ ಕೆಟ್ಟ ದಾಳಿಗೆ ಇಸ್ರೇಲ್ ಒಳಗಾಗಿದೆ, ನೂರಾರು ವಿದೇಶಿಗರನ್ನು ಹಮಾಸ್ ಉಗ್ರರು ಒತ್ತೆಯಾಳನ್ನಾಗಿ ಇಟ್ಟುಕೊಂಡಿದ್ದಾರೆ. ಹಮಾಸ್ ನಾಶ ಮಾಡದೇ ಸುಮ್ಮನೆ ಇರುವುದಿಲ್ಲ ಎಂದು ಇಸ್ರೇಲ್ ಹೇಳಿದೆ.

ಈವರೆಗೂ 1,350ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಐದು ಸಾವಿರಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!