ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾರ್ತಿಕಾ ನಾಯರ್ ಕನ್ನಡಿಗರಿಗೆ ʻಬೃಂದಾವನʼ ಸಿನಿಮಾ ಮೂಲಕ ಪರಿಚಿತರಾದವರು. ಆಗಿನ ಸ್ಟಾರ್ ಹೀರೋಯಿನ್ ರಾಧಾ ಅವರ ಮಗಳಾಗಿ ಪರಿಚಯವಾದ ಈಕೆ ಕನ್ನಡ, ತೆಲುಗು, ತಮಿಳಿನಲ್ಲೂ ಸಿನಿಮಾಗಳನ್ನು ಮಾಡಿದ್ದಾರೆ. ಸದ್ಯ ಚಿತ್ರರಂಗದಿಂದ ದೂರ ಇರುವ ನಟಿಗೆ ಕಂಕಣ ಭಾಗ್ಯ ಕೂಡಬಂದಿದ್ದು, ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ.
ಕಾರ್ತಿಕಾ ಸಿನಿಮಾದಿಂದ ದೂರ ಉಳಿದು ತನ್ನ ಕುಟುಂಬದ ಹೋಟೆಲ್ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದಾರೆ. ಇದೀಗ ಕಾರ್ತಿಕಾ ಅವರು ಭಾವಿ ಪತಿಯನ್ನು ತಬ್ಬಿಕೊಂಡು ಉಂಗುರವನ್ನು ತೋರಿಸುತ್ತಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಆದರೆ ಆ ಹುಡುಗ ಯಾರೆಂದು ಗೊತ್ತಾಗಿಲ್ಲ. ಅಭಿಮಾನಿಗಳು, ನೆಟ್ಟಿಗರು ಮತ್ತು ಅನೇಕ ಸೆಲೆಬ್ರಿಟಿಗಳು ಸಹ ಕಾರ್ತಿಕಾಗೆ ಶುಭಹಾರೈಸುತ್ತಿರುವುದರಿಂದ ಕಾರ್ತಿಕಾ ನಿಶ್ಚಿತಾರ್ಥ ಮಾಡಿಕೊಂಡಿರುವುದು ಪಕ್ಕಾ ಆಗಿದೆ.