ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಪದಾರ್ಥಗಳು:
ಬೆಳ್ಳುಳ್ಳಿ- 100 ಗ್ರಾಂ, ಹುಣಸೆಹಣ್ಣು 100 ಗ್ರಾಂ, ಮೆಣಸಿನಕಾಯಿ- 4 ಚಮಚ, ಉಪ್ಪು-2 ಚಮಚ, ಸಾಸಿವೆ- ಮೆಂತ್ಯ ಪುಡಿ- 2 ಚಮಚ, ಕಡಲೆ ಎಣ್ಣೆ- 100 ಗ್ರಾಂ.
ತಯಾರಿಸುವ ವಿಧಾನ:
ಮೊದಲು ಒಂದು ಬಟ್ಟಲಿನಲ್ಲಿ ಸಿಪ್ಪೆ ಸುಲಿದ ಬೆಳ್ಳುಳ್ಳಿ ತೆಗೆದುಕೊಳ್ಳಿ. ಮೆಣಸಿನ ಪುಡಿ, ಹುಣಸೆ ಹಣ್ಣಿನ ತಿರುಳು, ಉಪ್ಪು, ಎಣ್ಣೆ, ಸಾಸಿವೆ ಮತ್ತು ಮೆಂತ್ಯ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ತೇವವಿರದ ಒಂದು ಗಾಜಿನ ಬಾಟಲಿಗೆ ತುಂಬಿಕೊಳ್ಳಿ. ಒಂದು ವಾರ ಕಳೆದ ಬಳಿಕ ಅದಕ್ಕೆ ಸಾಸಿವೆ ಒಗ್ಗರಣೆ ಕೊಟ್ಟರೆ ಬಹಳ ರುಚಿ.
ಪ್ರತಿದಿನ ಬೆಳ್ಳುಳ್ಳಿ ಉಪ್ಪಿನಕಾಯಿಯೊಂದಿಗೆ ಅನ್ನ ತಿಂದು ಬೆಚ್ಚನೆಯ ನೀರು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು. ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುವುದರ ಜೊತೆಗೆ ಮಧುಮೇಹಕ್ಕೂ ಬೆಳ್ಳುಳ್ಳಿ ಒಳ್ಳೆಯದು.