Sunday, December 10, 2023

Latest Posts

ಮಂಜೂಷಾ ಮ್ಯೂಸಿಯಂ ಸೇರಿದ 75 ವರ್ಷದ ಹಳೆಯ ಲಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬರೋಬ್ಬರಿ 75 ವರ್ಷದ ಲಾರಿಯೊಂದು ಧರ್ಮಸ್ಥಳದ ಮಂಜೂಷಾ ಮ್ಯೂಸಿಯಂ ಸೇರಿದೆ.

ಹೊಸ ಲುಕ್‌ನೊಂದಿಗೆ ಲಾರಿ ವಿಂಟೇಜ್ ಲುಕ್‌ನಲ್ಲಿ ರೆಡಿಯಾಗಿದ್ದು, ನೋಡೋಕೆ ಎರಡು ಕಣ್ಣು ಸಾಲದು ಎನ್ನುವಂತೆ ಕಾಣುತ್ತಿದೆ.

1948 ರಲ್ಲಿ ಫೋರ್ಡ್ ಕಂಪನಿಯ ಎಂ ಸೀರೀಸ್‌ನ ಈ ಲಾರಿಯು ಕ್ಷೇತ್ರದ ಸರಕು ಸಾಗಾಣಿಕೆಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಸುಮಾರು 30 ವರ್ಷ ಕಾರ್ಯನಿರ್ವಹಿಸಿದೆ. ತದನಂತರ ಬಿಡಿ ಭಾಗದ ಕೊರತೆಯಿಂದಾಗಿ ಸೇವೆ ನಿಲ್ಲಿಸಿತ್ತು.

ವೀರೇಂದ್ರ ಹೆಗ್ಡೆಯವರು ಈ ವಾಹನವನ್ನು ಸುಂದರವಾಗಿ ರೂಪಿಸಲು ತಾವೇ ಲಾರಿಯ ಲುಕ್‌ನ ನೀಲನಕ್ಷೆಯನ್ನು ತಯಾರಿಸಿದ್ದಾರೆ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!