BIG NEWS | ಅಮಿತ್​ ಶಾ ಚುನಾವಣಾ ಪ್ರಚಾರದ ವೇಳೆ ರಥಕ್ಕೆ ವಿದ್ಯುತ್​ ಸ್ಪರ್ಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜಸ್ಥಾನದ ಪರ್ಬಸ್ತರ್‌ನಲ್ಲಿ ನಡೆದ ರೋಡ್ ಶೋ ವೇಳೆ ಚುನಾವಣಾ ಪ್ರಚಾರದ ರಥಕ್ಕೆ ವಿದ್ಯುತ್ ತಂತಿ ತಗುಲಿದ್ದು, ​ಕೇಂದ್ರ ಗೃಹ ಸಚಿವ ಅಮಿತ್​ ಶಾ ಅಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.

ಅದೃಷ್ಟವಶಾತ್ ಘಟನೆಯಲ್ಲಿ ಅಮಿತ್ ಶಾಗೆ ಯಾವುದೇ ಗಾಯಗಳಾಗಿಲ್ಲ.

ಪ್ರಚಾರದ ರಥಕ್ಕೆ ವಿದ್ಯುತ್​ ತಂತಿ ತಗುಲಿದ್ದು, ತಕ್ಷಣವೇ ಎಚ್ಚೆತ್ತ ಭದ್ರತಾ ಸಿಬ್ಬಂದಿ ಕಾರು ನಿಲ್ಲಿಸಿ ಸಂಭವಿಸಲಿದ್ದ ಅನಾಹುತವನ್ನು ತಪ್ಪಿಸಿದ್ದಾರೆ.

ಇದಾದ ಬಳಿಕ ಶಾ, ರೋಡ್ ಶೋ ಅನ್ನು ಅರ್ಧದಲ್ಲೇ ಸ್ಥಗಿತಗೊಳಿಸಿದರು. ಕೂಡಲೇ, ಭದ್ರತಾ ಸಿಬ್ಬಂದಿ ಶಾ ಅವರನ್ನು ಕಾರಿನಲ್ಲಿ ಕೂರಿಸಿ ಅಲ್ಲಿಂದ ತೆರಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!