ಹೊಸದಿಗಂತ ವರದಿ,ಪಡುಬಿದ್ರಿ:
ಉಡುಪಿ ಜಿಲ್ಲೆಯ ಉಚ್ಚಿಲದಲ್ಲಿ ಕೊಳಚೆಗುಂಡಿಯಲ್ಲಿ ಕಂಡು ಬಂದ ಕಾಡುಕೋಣ (ಕಾಟಿ)ವನ್ನು ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಿ ರಕ್ಷಿಸಿದ ಘಟನೆಯು ಮಂಗಳವಾರ ರಾತ್ರಿಯ ವೇಳೆಯಲ್ಲಿ ನಡೆದಿದೆ.
ಸೋಮವಾರ ತಡರಾತ್ರಿಯಲ್ಲಿ ಓಡಾಟ ನಡೆಸುವ ವೇಳೆ ರಾ.ಹೆ. 66 ರ ಸನಿಹದಲ್ಲಿ ಇರುವ ಮಹಾಲಕ್ಷ್ಮಿ ದೇವಸ್ಥಾನದ ಬಳಿಯಲ್ಲಿ ಇದ್ದ ಕೊಳಚೆಗುಂಡಿ ಸುಮಾರು 5 ವರ್ಷ ಪ್ರಾಯದ ಕಾಟಿ ಅಂದಾಜು ತಪ್ಪಿ ಬಿದ್ದರುತ್ತದೆ ಎಂದು ಶಂಕಿಸಲಾಗಿದೆ.
ಮಂಗಳವಾರ ಹಗಲಿಡೀ ಜನರ ಓಡಾಟ ಹಾಗೂ ವೀಕ್ಷಣೆಗೆ ಬರುತ್ತಿದ್ದ ಜನರಿಂದ ರಕ್ಷಣೆ ಕಾರ್ಯಾಚರಣೆಗೆ ಅಡ್ಡಿಯಾಗುವ ಸಾಧ್ಯತೆ ಜೊತೆಗೆ ಅಪಾಯವನ್ನೂ ಪರಿಗಣಿಸಿ ಮಂಗಳವಾರ ರಾತ್ರಿಯ ವೇಳೆಯಲ್ಲಿ ಸುರಕ್ಷತಾ ಕ್ರಮದೊಂದಿಗೆ ಅರಣ್ಯ ಇಲಾಖೆಯು ಕೊಚ್ಚೆಗುಂಡಿಯಿಂದ ಕಾಟಿಯು ಹೊರಕ್ಕೆ ತೆರಳುವಲ್ಲಿ ಜೆಸಿಬಿ ಮೂಲಕ ಕಾರ್ಯಾಚರಣೆಯನ್ನು ನಡೆಸಿದ್ದು ಯಶಸ್ವಿಯಾಗಿದ್ದಾರೆ.