ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನದ ಅಧಿದೇವತೆ ಹಾಸನಾಂಬ ದೇವಿಯ ದರುಶನಕ್ಕೆ ಇಂದೇ ಕಡೆಯ ದಿನವಾಗಲಿದೆ. ಕಡೆಯ ದಿನವಾದ ಕಾರಣ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.
ಇಂದು ಬೆಳಗ್ಗೆ ಏಳು ಗಂಟೆಯಿಂದಲೇ ದೇವಿ ದರುಶನಕ್ಕೆ ಅವಕಾಶ ನೀಡಲಾಗಿದ್ದು, ನಾಳೆ ದೇಗುಲದ ಬಾಗಿಲನ್ನು ಮುಚ್ಚಲಾಗುತ್ತದೆ. ಇದಾದ ಒಂದು ವರ್ಷದವರೆಗೂ ದೇಗುಲದ ಬಾಗಿಲನ್ನು ತೆರೆಯಲಾಗುವುದಿಲ್ಲ.
ಶಾಸ್ತ್ರೋಕ್ತವಾಗಿ ನಾಳೆ ಪೂಜೆ ವಿಧಿವಿಧಾನದ ನಂತರ ದೇಗುಲದ ಬಾಗಿಲನ್ನು ಮುಚ್ಚಲಾಗುತ್ತದೆ. ಮಹೋತ್ಸವ ಆರಂಭವಾದ ದಿನ ಹಚ್ಚಿದ ದೀಪ ಮುಂದಿನವರ್ಷದವರೆಗೂ ಉರಿಯುತ್ತಲೇ ಇರುತ್ತದೆ ಹಾಗೂ ಇಟ್ಟ ಪ್ರಸಾದ ಹಳಸುವುದಿಲ್ಲ ಎನ್ನುವುದು ಇಲ್ಲಿನ ಪ್ರತೀತಿಯಾಗಿದೆ.
ನ.2ರಿಂದ ಮಹೋತ್ಸವ ಆರಂಭವಾಗಿದ್ದು, 12 ದಿನಗಳ ಕಾಲ ಭಕ್ತರಿಗೆ ದೇವಿ ದರುಶನಕ್ಕೆ ಅವಕಾಶ ನೀಡಲಾಗಿತ್ತು. ದೀಪಾವಳಿ ಹಬ್ಬದ ಕಾರಣ ಸಾಲು ಸಾಲು ರಜೆ ಇದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವರ ದರುಶನ ಪಡೆದಿದ್ದಾರೆ. ಈವರೆಗೂ 12 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರುಶನ ಪಡೆದಿದ್ದಾರೆ ಎನ್ನಲಾಗಿದೆ.