ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ಹಳೆಯ ಕಹಿ-ಸಿಹಿ ನೆನಪು ಕಾಡಬಹುದು. ಅದಕ್ಕೆ ಕಾರಣ ಹಳೆಯ ಸ್ನೇಹಿತರೊಬ್ಬರ ಸಂಪರ್ಕ. ಭಾವನಾತ್ಮಕ ಏರುಪೇರು ಅನುಭವಿಸುವಿರಿ.
ವೃಷಭ
ಭಾವನಾತ್ಮಕ ಏರುಪೇರು ಅನುಭವಿಸುವಿರಿ. ಆಪ್ತರೊಬ್ಬರ ನಡೆನುಡಿ ನೋವು ತರಬಹುದು. ವಿವೇಕದಿಂದ ವರ್ತಿಸಿರಿ. ಅಸಹನೆ , ವಾಗ್ವಾದ ಒಳಿತು ತರದು.
ಮಿಥುನ
ಆಪ್ತರೊಂದಿಗೆ ಭಿನ್ನಮತ ಉಂಟಾದೀತು. ಹೃದಯದ ಭಾವನೆಯ ಅನುಸಾರ ನಡಕೊಳ್ಳಿ. ಇದರಿಂದ ಮತ್ತೆ ಹೊಂದಾಣಿಕೆ. ಆರ್ಥಿಕ ಒತ್ತಡ ಕಾಡುವುದು.
ಕಟಕ
ಕಾರ್ಯದೊತ್ತಡ ಕಾಡಿದರೂ ಅದನ್ನು ಸಮರ್ಥವಾಗಿ ನಿಭಾಯಿಸುವಿರಿ. ಪ್ರೀತಿಯ ವಿಷಯದಲ್ಲಿ ಸಕಾರಾತ್ಮಕ ಬೆಳವಣಿಗೆ ಉಂಟಾಗುವುದು.
ಸಿಂಹ
ಬಿಡುವಿಲ್ಲದ ಕೆಲಸ.ಆದರೆ ಸಂಜೆ ವೇಳೆಗೆ ಆಪ್ತರೊಂದಿಗೆ ಒತ್ತಡ ಮರೆಯುವಿರಿ. ಕೌಟುಂಬಿಕ ಸಮಸ್ಯೆ ಪರಿಹಾರದ ಸಂಕೇತ ತೋರಿಬರುವುದು.
ಕನ್ಯಾ
ಪ್ರಮುಖ ಕೆಲಸದ ಹೊಣೆ ನಿಮ್ಮ ಹೆಗಲೇರುವುದು. ಅದನ್ನು ಸರಿಯಾಗಿ ನಿಭಾಯಿಸಿ. ವಸ್ತು ಖರೀದಿಗೆ ಈಗ ಅವಸರ ತೋರದಿರಿ.
ತುಲಾ
ತಪ್ಪುಗಳಿಂದ ಪಾಠ ಕಲಿಯಬೇಕು. ಇದನ್ನು ನೀವಿಂದು ಅರಿಯುವಿರಿ. ವಾಹನ ಚಾಲನೆಯಲ್ಲಿ ಎಚ್ಚರವಿರಲಿ. ಕೌಟುಂಬಿಕ ಸಾಮರಸ್ಯ
ವೃಶ್ಚಿಕ
ನೋವು ನಲಿವು ಜೀವನದ
ಅಂಗ. ಅದನ್ನಿಂದು ನೀವು ಅನುಭವಿಸುವಿರಿ. ವೃತ್ತಿಯಲ್ಲಿ ವಾಗ್ವಾದ ದಿಂದ ಆದಷ್ಟೂ ದೂರವಿರಿ.
ಧನು
ಹೊರಗಿನ ತಿನಿಸು ತಿನ್ನಲು ಹೋಗದಿರಿ. ಆರೋಗ್ಯದ ಮೇಲೆ ಪರಿಣಾಮ ಸಂಭವ. ಬಿಡುವಿಲ್ಲದ ಕೆಲಸವು ಸಂಗಾತಿಗಳ ಮಧ್ಯೆ ವಿರಸಕ್ಕೆ ಕಾರಣವಾದೀತು.
ಮಕರ
ಆಪ್ತರಿಂದ ಅಚ್ಚರಿಯ ಕೊಡುಗೆ ದೊರೆತೀತು. ಸಣ್ಣ ವಿಷಯವು ಮನಶ್ಯಾಂತಿ ಕದಡಿದರೂ ಸಂಜೆ ವೇಳೆಗೆ ಎಲ್ಲವೂ ನಿರಾಳ. ಹರಿತ ವಸ್ತುಗಳಿಂದ ದೂರವಿರಿ.
ಕುಂಭ
ಆಪ್ತ ಸಂಬಂಧವನ್ನು ಮುಂದಿನ ಹಂತಕ್ಕೆ ಏರಿಸಲು ಸಕಾಲ. ಆರೋಗ್ಯದ ಕಡೆ ಗಮನವಿರಲಿ. ಮೈಕೈ ನೋವು ಬಾಧಿಸಬಹುದು.
ಮೀನ
ಕೆಲಸದಲ್ಲಿ ಕೆಲವು ವಿಘ್ನಗಳು. ನಿಮ್ಮ ಕಾರ್ಯವೈಖರಿ ಕೆಲವರಿಗೆ ಹಿಡಿಸ ಲಾರದು. ಅವರಿಂದ ಆಕ್ಷೇಪ ಬಂದೀತು. ಸಂಘರ್ಷ ಬೇಡ.