SHOCKING| ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಇ-ಮೇಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು 48ಗಂಟೆಗಳ ಒಳಗೆ ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ ಇ-ಮೇಲ್‌ ಬಂದಿದೆ. ಬಿಟ್‌ಕಾಯಿನ್‌ನಲ್ಲಿ 1 ಮಿಲಿಯನ್ ಡಾಲರ್ ಪಾವತಿಸದಿದ್ದರೆ, ವಿಮಾನ ನಿಲ್ದಾಣದ ಟರ್ಮಿನಲ್ 2 ಅನ್ನು ಸ್ಫೋಟಿಸುವುದಾಗಿ ಮುಂಬೈ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಲಿಮಿಟೆಡ್ ನ ಫೀಡ್ ಬ್ಯಾಕ್ ಇನ್ ಬಾಕ್ಸ್‌ಗೆ ಗುರುವಾರ ಬೆದರಿಕೆ ಮೇಲ್ ಬಂದಿತ್ತು.

ಈ ಸ್ಫೋಟ ತಪ್ಪಿಸಬೇಕಾದರೆ 48 ಗಂಟೆಗಳ ಒಳಗೆ ಬಿಟ್‌ಕಾಯಿನ್‌ನಲ್ಲಿ $ 1 ಮಿಲಿಯನ್ ಕಳುಹಿಸಬೇಕೆಂದು ಆಗಂತುಕ ಬೇಡಿಕೆ ಇಟ್ಟಿದ್ದಾನೆ. ಅಷ್ಟೇ ಅಲ್ಲ, 24 ಗಂಟೆಗಳ ನಂತರ ಮತ್ತೊಂದು ಎಚ್ಚರಿಕೆ ನೀಡುವುದಾಗಿ ಇಮೇಲ್‌ನಲ್ಲಿ ತಿಳಿಸಿದ್ದಾನೆ. ಬೆದರಿಕೆ ಇಮೇಲ್ ಕಳುಹಿಸಿದ ಅಪರಿಚಿತ ವ್ಯಕ್ತಿಯ ವಿರುದ್ಧ ಇದೀಗ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮುಂಬೈ ಪೊಲೀಸರು ಐಪಿಸಿ 385,505(1) ಬಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು,  ಸ್ಫೋಟದ ಬೆದರಿಕೆ ಕುರಿತು ತನಿಖೆ ಆರಂಭಿಸಿದ್ದಾರೆ. ಈ ಹಿಂದೆಯೂ ಹಲವು ಬಾರಿ ಬಾಂಬ್ ಬೆದರಿಕೆಗಳು ಬಂದಿದ್ದವು. ಬಾಂಬ್ ಬೆದರಿಕೆಯಿಂದಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಜಾರಿ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!