ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಮೆಟ್ರೋದಲ್ಲಿ ಸಿನಿಮಾ, ಧಾರಾವಾಹಿ ಚಿತ್ರೀಕರಣಕ್ಕೆ ಬಿಎಂಆರ್ಸಿಎಲ್ ಗ್ರೀನ್ ಸಿಗ್ನಲ್ ನೀಡಿದೆ.
ಇನ್ಮುಂದೆ ಬಣ್ಣದ ಲೋಕದ ಮಂದಿ ನಮ್ಮ ಮೆಟ್ರೋಗಳಲ್ಲಿ ಕಾಣಿಸಿಕೊಳ್ಳಲಿದ್ದು, ಭರ್ಜರಿ ಚಿತ್ರೀಕರಣಗಳು ನಡೆಯಲಿದೆ.
ದೆಹಲಿ, ಚೆನ್ನೈ ಮೆಟ್ರೋ ಬಳಿಕ ಇದೀಗ ಬೆಂಗಳೂರು ಮೆಟ್ರೋ ರೈಲಿನಲ್ಲಿಯೂ ಬಿಎಂಆರ್ಸಿಎಲ್ ಶೂಟಿಂಗ್ ಗೆ ಅವಕಾಶ ನೀಡಿದೆ. ಅಲ್ಲದೆ ಕೆಲವು ಷರತ್ತುಗಳನ್ನು ವಿಧಿಸಿದೆ.
ಈ ಕುರಿತಾಗಿ ಕರ್ನಾಟಕ ವಾಣಿಜ್ಯ ಮಂಡಳಿ ಉಪಾಧ್ಯಕ್ಷೆ ಪ್ರಮಿಳಾ ಜೋಶಾಯಿ ಸಂತಸ ವ್ಯಕ್ತಪಡಿಸಿದ್ದು, ಚಿತ್ರರಂಗ ಈ ವಿಚಾರವನ್ನು ಸ್ವಾಗತಿಸುತ್ತದೆ ಮತ್ತು ಕನ್ನಡ ಚಿತ್ರರಂಗ ಬೆಳೆಯುತ್ತದೆ ಎಂದಿದ್ದಾರೆ.