ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆ ಇಂದಿನಿಂದ ಆರಂಭವಾಗಲಿದೆ.
ದೊಡ್ಡ ಗಣೇಶನ ದೇವಸ್ಥಾನದ ಸುತ್ತ ಮುತ್ತ ಇಂದಿನಿಂದ ಐದು ದಿನಗಳ ಕಾಲ ಜಾತ್ರೆ ವಾತಾವರಣ ಇರಲಿದೆ. ಈ ಹಬ್ಬಕ್ಕೆ ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆ ಇದೆ.
ಈ ವರ್ಷದ ಪರಿಷೆ ಅಧಿಕೃತವಾಗಿ ಸೋಮವಾರದಿಂದ ಆರಂಭವಾಗಲಿದೆ. ದೊಡ್ಡ ಬಸವಣ್ಣ ಹಾಗೂ ಗಣೇಶನಿಗೆ ಕಡಲೆಕಾಯಿ ಅಭಿಷೇಕ ಮಾಡುವ ಮೂಲಕ ಮುಜರಾಯಿ ಸಚಿವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಕಡ್ಲೆಕಾಯಿ ಪರಿಷೆ ಜೊತೆಗೆ ಸಾಂಸ್ಕೃತಿ ಕಾರ್ಯಕ್ರಮಗಳನ್ನೂ ಆಯೋಜನೆ ಮಾಡಲಾಗುತ್ತದೆ. ನೂರಾರು ಸಂಖ್ಯೆಯಲ್ಲಿ ವ್ಯಾಪಾರಸ್ಥರು ಪರಿಷೆಗೆ ಆಗಮಿಸಲಿದ್ದಾರೆ.