ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾಕ್ಷೇತ್ರ ಶಬರಿಮಲೆಯಲ್ಲಿ ಭಕ್ತರ ದಟ್ಟಣೆ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಸ್ವಾಮಿಯ ದರುಶನ ಅವಧಿಯನ್ನು ವಿಸ್ತರಿಸಲಾಗಿದೆ.
ದೇಶದ ವಿವಿಧ ಭಾಗಗಳಿಂದ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ. ಪ್ರತಿನಿತ್ಯ ಇಲ್ಲಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಸುಮಾರು 90 ಸಾವಿರದಷ್ಟಿದೆ ಎಂಬುದನ್ನು ಅಂಕಿಅಂಶ ಹೇಳುತ್ತಿವೆ. ಆದರೆ ಇಲ್ಲಿನ ಪವಿತ್ರ 18ನೇ ಹಂತದಲ್ಲಿ ಪ್ರತೀ ನಿಮಿಷಕ್ಕೆ ಕೇವಲ 60 ಮಂದಿಗೆ ಮಾತ್ರ ಸ್ವಾಮಿ ದರುಶನದ ಅವಕಾಶವಿದೆ.
ಹೀಗಾಗಿ ಭಕ್ತದಟ್ಟಣೆ ಕಡಿಮೆ ಮಾಡಲು ದೇವಸ್ವಂ ಈ ನಿರ್ಧಾರ ಕೈಗೊಂಡಿದೆ. ಈ ನಡುವೆ ಭಕ್ತರ ಸುರಕ್ಷತೆಯ ಬಗ್ಗೆಯೂ ದೇವಸ್ವಂ ಕಾಳಜಿವಹಿಸಿದ್ದು, ಹೈಕೋರ್ಟ್ ಕೂಡಾ ಈ ಬಗ್ಗೆ ನಿಗಾ ಇರಿಸಿದೆ. ಪ್ರತಿನಿತ್ಯ ಮಧ್ಯಾಹ್ನ 3 ರ ವರೆಗೂ ಗರ್ಭಗೃಹದ ಬಾಗಿಲು ತೆರೆಯಲು ಹೈಕೋರ್ಟ್ ಸೂಚಿಸಿದೆ.