ದಿನಭವಿಷ್ಯ: ಕುಟುಂಬ ಸದಸ್ಯರ ಬೇಡಿಕೆಗೆ ಸ್ಪಂದಿಸಿ, ಅವರನ್ನು ನಿರ್ಲಕ್ಷಿಸಬೇಡಿ

ಮೇಷ
ಹೆಚ್ಚು ಪ್ರಾಕ್ಟಿಕಲ್ ಆಗಿ ಇಂದು ವರ್ತಿಸುವಿರಿ. ಇದು ನಿಮ್ಮ ಪಾಲಿಗೆ ಒಳಿತು ತರಲಿದೆ. ಸಣ್ಣ ವಿಷಯಕ್ಕೂ ಭಾವುಕರಾಗಿ ಕೊರಗುವುದು ತಪ್ಪಲಿದೆ.

ವೃಷಭ
ಲೌಕಿಕ ಸುಖ, ಸಂತೋಷಕ್ಕೆ ಇಂದು ಹಾತೊರೆಯುವಿರಿ. ಇದು ನಿಮ್ಮ ಸಹಜ ಗುಣವಲ್ಲ. ಜಡತ್ವವೂ ಕಾಡಬಹುದು. ಇದು ತಾತ್ಕಾಲಿಕ ಅವಸ್ಥೆ.

ಮಿಥುನ
ಗೊಂದಲದ ಮನಸ್ಥಿತಿ. ಹಿಂದಿನ ದಿನದ ಘಟನೆ ಇದಕ್ಕೆ ಕಾರಣವಾದೀತು. ಆತುರದ ತೀರ್ಮಾನ ತೆಗೆದುಕೊಳ್ಳದಿರಿ. ವೃತ್ತಿಯಲ್ಲಿ ಟೀಕೆ ಕೇಳುವಿರಿ.

ಕಟಕ
ಖರ್ಚು ಹೆಚ್ಚಳ. ಖರೀದಿ ಧಾವಂತಕ್ಕೆ ನಿಯಂತ್ರಣ ಹಾಕಿ. ಆರೋಗ್ಯದ ಕುರಿತೂ ಹೆಚ್ಚು ಗಮನ ಅವಶ್ಯ. ಹೊಟ್ಟೆ ನೋವಿನಂತಹ ಸಮಸ್ಯೆ ಉಂಟಾದೀತು.

ಸಿಂಹ
ಕೇವಲ ಮಾತಿನಿಂದ ಇತರರನ್ನು ಅಂದಾಜಿಸಬೇಡಿ. ನಿಮ್ಮ ಅಂದಾಜು ತಪ್ಪಾದೀತು. ವರ್ತನೆಯು ನಿಜವಾದ ವ್ಯಕ್ತಿತ್ತ ತೋರುತ್ತದೆ ಎಂದು ಅರಿಯಿರಿ.

ಕನ್ಯಾ
ಕುಟುಂಬ ಸದಸ್ಯರ ಬೇಡಿಕೆಗೆ ಸ್ಪಂದಿಸಿ. ಅವರನ್ನು ನಿರ್ಲಕ್ಷಿಸಬೇಡಿ. ವೃತ್ತಿಯ ಒತ್ತಡ ಹೆಚ್ಚು. ಶಾಂತಿ, ನೆಮ್ಮದಿ ಕಳಕೊಳ್ಳುವಿರಿ. ಧನವ್ಯಯ.

ತುಲಾ
ವೃತ್ತಿಯಲ್ಲಿ ಸವಾಲು ಎದುರಿಸುವಿರಿ. ನಿಮ್ಮ ಕೆಲಸದ ಯಶಸ್ಸನ್ನು ಇತರರು ತಮ್ಮದೆಂದು ಹೇಳಬಹುದು. ಎಲ್ಲರನ್ನು ಕುರುಡಾಗಿ ನಂಬದಿರಿ.

ವೃಶ್ಚಿಕ
ಕೆಲವರು ನಿಮ್ಮನ್ನು ತಪ್ಪುದಾರಿಗೆ ಎಳೆಯಲು ಯತ್ನಿಸುವರು. ಕೇಳಿದ್ದೆಲ್ಲ ನಂಬದಿರಿ. ನಿರ್ಧಾರ ತಾಳುವಾಗ ನಿಮ್ಮ ವಿವೇಕ ಬಳಸಿಕೊಳ್ಳಿ. ಆರ್ಥಿಕ ಸಮಸ್ಯೆ ಕಾಡಬಹುದು.

ಧನು
ನಿಮ್ಮ ನೆನಪು ಕೆದಕುವ ವ್ಯಕ್ತಿಯನ್ನು ಭೇಟಿಯಾಗುವ ಸಂಭವ. ಆರೋಗ್ಯದ ಬಗ್ಗೆ  ಕಾಳಜಿ ವಹಿಸಿ. ವೃತ್ತಿಯಲ್ಲಿ ಆತ್ಮವಿಶ್ವಾಸ ಕಳಕೊಳ್ಳದಿರಿ.

ಮಕರ
ನಿಮ್ಮ ಹಿತೈಷಿಗಳು ಎಂದು ಹೇಳಿಕೊಳ್ಳುವ ಮಂದಿ ನಿಮಗೇ ವಿರೋಧವಾದಾರು. ಎಚ್ಚರದಿಂದಿರಿ. ವೃತ್ತಿಯಲ್ಲಿ ಒತ್ತಡ ಹೆಚ್ಚುವುದು.

ಕುಂಭ
ಕೌಟುಂಬಿಕ ವಿಷಯ ಇಂದು ಆದ್ಯತೆ ಪಡೆಯುವುದು. ಹಾಗಾಗಿ ವೃತ್ತಿಯಲ್ಲಿ ಏಕಾಗ್ರತೆ ಕಷ್ಟವಾದೀತು. ಆತ್ಮೀಯರ ಜತೆ ಮುನಿಸು ಸಂಭವ.

ಮೀನ
ವೃತ್ತಿ ಮತ್ತು ಮನೆಯಲ್ಲಿ ಗೊಂದಲದ ಸ್ಥಿತಿ. ಒಳಿತು ಕೆಡುಕಿನ ಸಂಘರ್ಷ. ಇಂತಹ ಪರಿಸ್ಥಿತಿ ನಿಭಾವಣೆ ನಿಮಗೆ ಕಷ್ಟವೇನಲ್ಲ. ವಿವೇಚನೆ ಬಳಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here