ಮಾದಕ ವಸ್ತು ಕಳ್ಳಸಾಗಟ: ಏಳು ಮಂದಿ ಆರೋಪಿಗಳು ಸಿಸಿಬಿ ವಶಕ್ಕೆ

ಹೊಸದಿಂಗತ ಡಿಜಿಟಲ್ ಡೆಸ್ಕ್:

ಮಾದಕ ವಸ್ತು ಕಳ್ಳಸಾಗಣೆಯಲ್ಲಿ ತೊಡಗಿದ್ದ ಏಳು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಶಂಕಿತರಿಂದ 1.66 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

ಕಳೆದೊಂದು ವಾರದಿಂದ ಸಿಸಿಬಿ ಪೊಲೀಸರು ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅನೇಕರನ್ನು ಬಂಧಿಸಿದ್ದಾರೆ ಮತ್ತು ಅವರ ವಿರುದ್ಧ ಒಟ್ಟು ಐದು ಪ್ರಕರಣಗಳನ್ನು ದಾಖಲಿಸಿದ್ದಾರೆ. ಗಿರಿನಗರ, ಮಡಿವಾಳ, ಚಿಕ್ಕಜಾಲ, ಆರ್‌ಟಿ ನಗರ, ಬೈಯಪ್ಪನಹಳ್ಳಿಯಲ್ಲಿ ದಾಳಿ ನಡೆದಿದೆ.

ಬಂಧಿತನಿಂದ 18.5 ಕೆಜಿ ಗಾಂಜಾ, 203 ಗ್ರಾಂ ಎಂಡಿಎಂಎ, 410 ಟಿಎಸ್‌ಐ ಮಾತ್ರೆಗಳು, 7 ಸೆಲ್ ಫೋನ್‌ಗಳು, 2 ಮೋಟಾರ್‌ಸೈಕಲ್‌ಗಳು ಮತ್ತು 1 ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

2023 ರಲ್ಲಿ, ಬೆಂಗಳೂರು ಪೊಲೀಸರು ಪೀಟರ್ ಎಂಬ ನೈಜೀರಿಯಾದ ಡ್ರಗ್ ಪೆಡ್ಲರ್ ಅನ್ನು ಬಂಧಿಸಿದ್ದರು ಮತ್ತು NDPS ಕಾಯ್ದೆಯ ನಿರ್ದಿಷ್ಟ ಸೆಕ್ಷನ್‌ಗಳಿಂದ ನೀಡಲಾದ ಅಧಿಕಾರವನ್ನು ಬಳಸಿಕೊಂಡು ಅವರಿಂದ 12 ಲಕ್ಷ ಹಣವನ್ನು ವಶ ಪಡಿಸಿಕೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!