ಡಿ.ರೂಪಾ VS ರೋಹಿಣಿ ಸಿಂಧೂರಿ | ಅರ್ಜಿ ವಿಚಾರಣೆ ಮುಂದೂಡಿಕೆ, ಕ್ಷಮೆ ಕೇಳಬೇಕೆಂದು ಸಿಂಧೂರಿ ಪಟ್ಟು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಸ್ ಅಧಿಕಾರಿ ಡಿ.ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಕಲಹ ಸುಪ್ರೀಂ ಕೋರ್ಟ್‌ನಲ್ಲಿ ಇನ್ನೂ ಇತ್ಯರ್ಥವಾಗಿಲ್ಲ, ಇಬ್ಬರ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮುಂದೂಡಿದೆ.

ನನ್ನ ಕ್ಲೈಂಟ್ ವಿರುದ್ಧ ರೂಪಾ ಕೆಟ್ಟದಾಗಿ ಮಾತನಾಡಿದ್ದಾರೆ, ಅವಹೇಳನಾಕಾರಿ ಪೋಸ್ಟ್‌ಗಳನ್ನು ಮಾಡಿದ್ದಾರೆ. ಪೋಸ್ಟ್ ಡಿಲೀಟ್ ಮಾಡಬಹುದು. ಆದರೆ ಅದನ್ನು ಜನ ನೋಡಿಲ್ವಾ? ಔಮರ್ಯಾದೆಗೆ ಅವರು ಕ್ಷಮೆ ಕೇಳಲೇಬೇಕು ಎಂದು ರೋಹಿಣಿ ಸಿಂಧೂರಿ ಪರ ವಕೀಲರು ಹೇಳಿದ್ದಾರೆ.

ರೂಪಾ ಪರ ವಕೀಲರು ಠಕ್ಕರ್ ನೀಡಿದ್ದು, ರೋಹಿಣಿ ಕೂಡ ಕೆಟ್ಟ ಆರೋಪಗಳನ್ನು ಮಾಡಿದ್ದಾರೆ. ಬುದ್ಧಿಭ್ರಮಣೆಯಾಗಿದೆ ಎಂದೆಲ್ಲಾ ಮಾತನಾಡಿದ್ದಾರೆ, ಇದು ಸರಿಯಲ್ಲ ಎಂದು ವಾದಿಸಿದ್ದಾರೆ. ಅದಕ್ಕೆ ರೋಹಿಣಿ ಪರ ವಕೀಲರು ಉತ್ತರ ನೀಡಿದ್ದು, ಬುದ್ಧಿಭ್ರಮಣೆಯಾದ ಜನ ಈ ರೀತಿ ಪೋಸ್ಟ್ ಮಾಡ್ತಾರೆ ಎಂದು ಹೇಳಿದ್ದಾರೆ ಹೊರತು ರೂಪಾಗೆ ಬುದ್ಧಿಭ್ರಮಣೆ ಎಂದು ಹೇಳಿಲ್ಲ ಎಂದಿದ್ದಾರೆ.

ವಾದ ವಿವಾದಗಳನ್ನು ಆಲಿಸಿದ ನ್ಯಾ. ಎ.ಎಸ್ ಓಕಾ, ಈ ರೀತಿ ಮಾತುಗಳು ಬೆಳೆಯುತ್ತಲೇ ಹೋಗುತ್ತವೆ, ಒಂದು ನಿರ್ಧಾರಕ್ಕೆ ಬನ್ನಿ, ತಿಂಗಳ ಸಮಯ ನೀಡುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ಪೋಸ್ಟ್‌ಗಳನ್ನು ಡಿಲೀಟ್ ಮಾಡಿ. ಇದರಿಂದ ಫಲವಿಲ್ಲ. ನಿಮಗೆ ಉಜ್ವಲ ಭವಿಷ್ಯ ಇದೆ ಎಂದು ಹೇಳಿದ್ದಾರೆ.

ಇದಕ್ಕೆ ರೋಹಿಣಿ ಪರ ವಕೀಲರು ಮಾತನಾಡಿದ್ದು, ಭವಿಷ್ಯ ಇರೋದು ನಿಜ, ಆದರೂ ಇಷ್ಟು ಮಾತುಗಳನ್ನು ನನ್ನ ಕ್ಲೈಂಟ್ ಅನಿಸಿಕೊಂಡಿದ್ದಾರೆ. ಅದಕ್ಕೆ ಕ್ಷಮೆ ಪಡೆಯಲು ಅವರು ಅರ್ಹರು, ಜನ ನೋಡುವ ದೃಷ್ಟಿಯೇ ಬದಲಾಗಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!