ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರತಿಷ್ಠಾಪನೆಯಿಂದ ಶಂಕರ ಮಠಗಳು ದೂರ ವಾದಕ್ಕೆ ಶೃಂಗೇರಿ ಕಿರಿಯ ಜಗದ್ಗುರು ವಿಧುಶೇಖರ ಶ್ರೀಗಳ ಸ್ಪಷ್ಟನೆ ನೀಡಿದ್ದಾರೆ.
ಮಕರ ಸಂಕ್ರಮಣದಿಂದ ಸೂರ್ಯ ತನ್ನ ಪಥ ಬದಲಿಸುತ್ತಾನೆ. ದಕ್ಷಿಣದಿಂದ ಉತ್ತರಾಯಣದ ಕಡೆಗೆ ಪಥ ಬದಲಾವಣೆ ಆಗಿದೆ. ಈ ಕ್ಷಣ ದೇಶದ ನಾಸ್ತಿಕರ ಎಲ್ಲರ ಚಿತ್ತ ಉತ್ತರದತ್ತ ನೆಟ್ಟಿದೆ. ಈ ಉತ್ತರಾಯಣದಲ್ಲಿ ಉತ್ತರದಲ್ಲಿ ವಿಶೇಷವಾದ ಕಾರ್ಯಕ್ರಮ ನಡೆಯುತ್ತಿದೆ.ನಾಸ್ತಿಕರ ಮನದಲ್ಲಿ ಎರಡು ವಿಚಾರಗಳು ಕೇಂದ್ರಿಕೃತವಾಗಿದೆ. ಒಂದು ಸೂರ್ಯ ದಕ್ಷಿಣದಿಂದ ಉತ್ತರಕ್ಕೆ ಪಥ ಬದಲಿಸಿರೋದು. ಮತ್ತೊಂದು ಉತ್ತರದ ಅಯೋಧ್ಯೆಯಲ್ಲಿ ನಡೆಯುತ್ತಿರೋ ಧರ್ಮಕಾರ್ಯ.
ಜನವರಿ 22ರಂದು ಪರಮ ಪವಿತ್ರವಾದ ಅಯೋಧ್ಯೆಯಲ್ಲಿ ರಾಮಜನ್ಮ ಭೂಮಿ ಸಂಪನ್ನವಾಗಲಿದೆ. ಅಯೋಧ್ಯೆಯಲ್ಲಿ ಭವ್ಯ ಮತ್ತು ನವ್ಯ ಮಂದಿರ ಲೋಕಾರ್ಪಣಗೊಳ್ಳಲಿದೆ.ಎಲ್ಲರ ಗಮನ ಆ ಕಡೆ ನೆಲೆನಿಂತ್ತಿದೆ. ಕೆಲವರು ದಕ್ಷಿಣದಿಂದ ಉತ್ತರಕ್ಕೆ ಪ್ರಯಾಣ ಬೆಳೆಸುತ್ತಿದ್ದಾರೆ. ಮತ್ತೆ ಕೆಲವರು ಅಯೋಧ್ಯೆಯ ಭವ್ಯ ರಾಮಮಂದಿರಕ್ಕೆ ಮನಸ್ಸಲ್ಲೇ ಖುಷಿ ಪಡುತ್ತಿದ್ದಾರೆ. 5 ಶತಮಾನಗಳ ಬಳಿಕ ಈ ಶುಭಕಾರ್ಯ ನಡೆಯುತ್ತಿದೆ. ಪ್ರತಿಯೊಬ್ಬ ನಾಸ್ತಿಕನಿಗೂ ಇದು ಸಂತೋಷದ ಸಂಗತಿಯಾಗಿದೆ ಎಂದಿದ್ದಾರೆ.
ಪ್ರತಿಯೊಬ್ಬರು ಅಯೋಧ್ಯೆಗೆ ಹೋಗಿ ಶ್ರೀರಾಮನ ದರ್ಶನ ಪಡೆಯಬೇಕು. ಅಯೋಧ್ಯೆ ಮತ್ತು ಶೃಂಗೇರಿಯಲ್ಲೂ ಕೂಡ ರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯುತ್ತದೆ. ಸೂರ್ಯವಂಶದಲ್ಲಿ ಶ್ರೀರಾಮನ ಅವತಾರವಾಗಿದೆ, ಇದು ಸೂರ್ಯವಂಶದ ಬಹದೊಡ್ಡ ಸೌಭಾಗ್ಯ. ಸೂರ್ಯ ದಕ್ಷಿಣದಿಂದ ಉತ್ತರಕ್ಕೆ ಪಥ ಬದಲಿಸಿದ್ದಾನೆ. ಇಂತಹಾ ಪವಿತ್ರ ಕಾರ್ಯವನ್ನ ಸೂರ್ಯದೇವ ಕೂಡ ದಕ್ಷಿಣದಿಂದ ಉತ್ತರದ ಕಡೆ ಹೋಗಿ ನೋಡುತ್ತಿದ್ದಾನೆ ಎಂದಿದ್ದಾರೆ.
ಈ ಕ್ಷಣ ಭಗವಾನ್ ಶ್ರೀರಾಮನ ರಾಮಭುಜಂಗ ಸ್ತೋತ್ರ ಪಠಣ ಮಾಡುವಂತೆ ಶ್ರೀಗಳು ಕರೆ ಕೊಟ್ಟಿದ್ದಾರೆ.
ಯಾವರೀತಿ ಶಂಕರಾಚಾರ್ಯರು ಪಠಣ ಮಾಡಿರುವ ರಾಮನ ಶ್ಲೋಕದಲ್ಲಿ ಅದ್ಭುತ ಅರ್ಥವಿದೆ. ಕಳೆದ ದೀಪಾವಳಿಯಲ್ಲೇ ರಾಮ ಜಪ ಮಾಡಲು ಹೇಳಿದ್ದೇವೆ. ನಾಸ್ತಿಕರು ಕೂಡ ರಾಮಜಪ ಮಾಡುತ್ತಿದ್ದಾರೆ ಎಂದ್ದಿದ್ದಾರೆ.
ಅಯೋಧ್ಯೆಗೂ ಶೃಂಗೇರಿಗೂ ಅವಿನಾಭಾವ ಸಂಬಂಧವಿದೆ. ಸುಳ್ಳು, ಅಪಪ್ರಚಾರಕ್ಕೆ ಯಾರೂ ಕಿವಿಗೊಡಬೇಡಿ. ಎಲ್ಲರೂ ರಾಮ ಜಪ ಮಾಡಿ ಎಂದು ಶೃಂಗೇರಿಯ ಕಿರಿಯ ಜಗದ್ಗುರು ವಿಧುಶೇಖರ ಶ್ರೀಗಳು ಕರೆ ನೀಡಿದ್ದಾರೆ.