ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಪ್ರಯುಕ್ತ ಶಿವಮೊಗ್ಗದಲ್ಲಿ ನಡೆದ ಹಿಂದೂಗಳ ಕಾರ್ಯಕ್ರಮದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಅಲ್ಲಾ ಹು ಅಕ್ಬರ್ ಎಂದು ಕೂಗಿ ಗಲಭೆ ಎಬ್ಬಿಸಿದ್ದರು.
ಶಿವಪ್ಪ ನಾಯಕ ಸರ್ಕಲ್ ಬಳಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಮಹಿಳೆ ಅಂಜುಂ ಅಲ್ಲಾ ಪರ ಘೋಷಣೆ ಕೂಗಿದ್ದು, ತಕ್ಷಣವೇ ಠಾಣೆಗೆ ಕರೆದುಕೊಂಡು ಹೋಗಲಾಗಿತ್ತು.
ಇದೀಗ ವಿಚಾರಣೆ ವೇಳೆ ಆಕೆ ಮಾನಸಿಕ ಅಸ್ವಸ್ಥೆ ಎಂದು ತಿಳಿದುಬಂದಿದೆ. ಆಕೆಯ ಪೋಷಕರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಆಕೆ ಮಾನಸಿಕ ಆರೋಗ್ಯ ಸರಿಯಿಲ್ಲ ಎನ್ನುವುದು ತಿಳಿದುಬಂದಿದೆ.
ಅಂಜುಂ ಖಾಸಗಿ ಶಾಲೆಯಲ್ಲಿ ಟೀಚರ್ ಆಗಿದ್ದಳು, ಮದುವೆ ನಂತರ ಗಂಡನ ಮನೆಯವರ ಟಾರ್ಚರ್ಗೆ ಆಕೆ ಹೀಗಾಗಿದ್ದಾಳೆ. ಅವಳನ್ನು ಒಬ್ಬಳೇ ಎಲ್ಲಿಗೂ ಕಳಿಸುವುದಿಲ್ಲ. ಅವಳ ಹಿಂದೆಯೇ ಗಾಡಿ ತೆಗೆದುಕೊಂಡು ನಾನು ಹೊರಟಿದ್ದೆ. ನಾನು ಬರುವಷ್ಟರಲ್ಲಿ ಘಟನೆ ನಡೆದುಹೋಗಿದೆ. ಆಕೆ ಈಗಲೂ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಅಂಜುಂ ತಂದೆ ಹೇಳಿದ್ದಾರೆ.