ಹೊಸ ದಿಗಂತ ಡಿಜಿಟಲ್ ಡೆಸ್ಕ್
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕಲು ಹಲವಾರು ಪ್ರಯತ್ನಗಳನ್ನು ಮಾಡಲಾಗುತ್ತಿದ್ದು, ಅದರಂತೆ ಮಾರತಹಳ್ಳಿ ಹೊರವರ್ತುಲ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ಎದುರಿಸುತ್ತಿರುವ ಟ್ರಾಫಿಕ್ ಸಮಸ್ಯೆ ಪರಿಹರಿಸಲು ಇದೀಗ ಎಚ್ಎಎಲ್ ಸಂಚಾರಿ ಪೊಲೀಸರು ಭಾರೀ ವಾಹನಗಳು ಸೇರಿದಂತೆ ಬಸ್ಗಳಿಗೂ ನಿರ್ಬಂಧ ಹಾಕಿದ್ದಾರೆ.
ರಸ್ತೆಯಲ್ಲಿ ಭಾರಿ ಸರಕು ಸಾಗಣೆ ವಾಹನಗಳು, ಬಿಎಂಟಿಸಿ ಹಾಗೂ ಖಾಸಗಿ ಬಸ್ಗಳ ಸಂಚಾರ ನಿಷೇಧಿಸಿ ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ. ಅದರಂತೆ ಹಿಂದೂ ಐಟಿಪಿಎಲ್, ಕಾಡುಗೋಡಿ ಮತ್ತು ವರ್ತೂರು ಕೋಡಿ ಕಡೆಗೆ ಹೋಗುವ ಮಾರ್ಗಗಳನ್ನು ಸಂಪರ್ಕಿಸಲು ಕಾರ್ತಿಕ್ ನಗರದ ಇಸ್ರೋ ಜಂಕ್ಷನ್ನಲ್ಲಿ ಭಾರೀ ವಾಹನಗಳು ಯುಟರ್ನ್ ತೆಗೆದುಕೊಳ್ಳುವಂತೆ ಪೊಲೀಸರು ಸೂಚಿಸಿದ್ದಾರೆ. ಆದರೆ ಶಾಲಾ ವಾಹನಗಳಿಗೆ ಈ ನಿಯಮ ಆನ್ವಯಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.