ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣಗಳಲ್ಲಿ ಯಾವ ಹಾಡು ಯಾವ ಕಾರಣಕ್ಕೆ ಹೇಗೆ ವೈರಲ್ ಆಗುತ್ತದೆ ಎಂದು ಹೇಳೋಕೆ ಅಸಾಧ್ಯ. ಇದೀಗ ಸಧ್ಯಕ್ಕೆ ಕರಿಮಣಿ ಮಾಲೀಕ ನೀನಲ್ಲ ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿದೆ.
ಈ ಹಾಡು ನಮ್ಮ ಮೆಂಟ್ರೋಗೂ ಕಾಲಿಟ್ಟಿದ್ದು, ಯುವಕರ ಗುಂಪೊಂದು ಮೆಟ್ರೋದೊಳಗೆ ಹಾಡಿಗೆ ರೀಲ್ಸ್ ಮಾಡಿ ಕುಣಿದಿದೆ. ಇದರಿಂದಾಗಿ ಅಕ್ಕಪಕ್ಕದ ಪ್ರಯಾಣಿಕರಿಗೆ ಇರಿಸು ಮುರಿಸಾಗಿದೆ. ಮೆಟ್ರೋದಲ್ಲಿ ಈ ರೀತಿ ರೀಲ್ಸ್ ಮಾಡುವುದು, ಅಥವಾ ಇತರ ಪ್ರಯಾಣಿಕರಿಗೆ ತೊಂದರೆಯಾಗುವಂಥೆ ನಡೆದುಕೊಳ್ಳುವಂತಿಲ್ಲ. ಇದೀಗ ರೀಲ್ಸ್ ಮಾಡಿದ ಹುಡುಗರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪ್ರಯಾಣಿಕರು ದೂರಿದ್ದಾರೆ.