ಹೊಸದಿಗಂತ , ಚಿಕ್ಕಬಳ್ಳಾಪುರ:
ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನಲೆ ಆಂಧ್ರಪ್ರದೇಶದ ಅನಂತಪುರದಿಂದ ಬೆಂಗಳೂರಿಗೆ ಕಾರಿನಲ್ಲಿ ಸಾಗುಸುತ್ತಿದ್ದ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ಚಿತ್ರವುಳ್ಳ 96 ವಾಚ್ ತನಿಖಾಧಿಕಾರಿಗಳು ಸಿಜ್ ಮಾಡಿದ್ದಾರೆ.
ಅನಂತಪುರದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದು ಸುಮಾರು ಒಂದು ಲಕ್ಷ ಬೆಲೆ ಬಾಳುವ ವಾಚ್ ಗಳು ಮತ್ತು ಒಂದು ಕಾರುನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಚೆಕ್ ಪೋಸ್ಟ್ ಬಳಿ ಅಧಿಕಾರಿಗಳು ತಪಾಸಣೆ ನಡೆಸುವ ವೇಳೆ ಸಿಕ್ಕಿಬಿದ್ದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಮೂಲದ ಬಂಡಿ ನಾಗೇಂದ್ರ ಎಂಬುವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು AP39HE1111 ಇನೋವಾ ಕಾರು ಆಂದ್ರ ಸಿಎಂ ಭಾವಚಿತ್ರವುಳ್ಳ ವಾಚ್ ವಶಪಡಿಸಿಕೊಂಡಿದ್ದಾರೆ.