ಹೊಸದಿಗಂತ ಡಿಜಿಟಲ್ ಡೆಸ್ಕ್:
ಚುರುಮುರಿ ಅಂಗಡಿ ವ್ಯಾಪಾರಿಯೊಬ್ಬರು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಗೆ ಚುನಾವಣಾ ಖರ್ಚಿಗಾಗಿ 25 ಸಾವಿರ ರೂಪಾಯಿ ನೀಡಿದ್ದಾರೆ.
ಲೋಕೇಶ್ ಬಾಬು ಎನ್ನುವ ವ್ಯಾಪಾರಿ ತನ್ನ ಸೇವೀಂಗ್ಸ್‌ನಲ್ಲಿದ್ದ ಹಣವನ್ನು ಎಲೆ ಅಡಿಕೆ ತಾಂಬೂಲದ ಜೊತೆ ನೀಡಿ ಗೆದ್ದು ಬನ್ನಿ ಎಂದು ಹೇಳಿದ್ದಾರೆ.
ಕೋಟ ಶ್ರೀನಿವಾಸ ಪೂಜಾರಿ ಪ್ರಚಾರ ಆರಂಭಿಸಿದ್ದು, ಚುರುಮುರಿ ಅಂಗಡಿಗೆ ಭೇಟಿ ನೀಡಿದ್ದರು. ಈ ವೇಳೆ ವ್ಯಕ್ತಿ ಹಣ ನೀಡಿ ತನ್ನ ನೆಚ್ಚಿನ ನಾಯಕ ಗೆಲ್ಲಲಿ ಎಂದು ಆಶಿಸಿದ್ದಾರೆ.