ದೇಶದ ಮೊದಲ ‘ಪುಷ್ಪಕ್’ ಆರ್‌ಎಲ್‍ವಿ ಸ್ಪೇಸ್‍ಶಿಪ್ ಲ್ಯಾಂಡಿಂಗ್ ಪ್ರಯೋಗ ಯಶಸ್ವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಸ್ರೋದ ಆರ್‌ಎಲ್‌ವಿ ಪುಷ್ಪಕ್‌ ಲ್ಯಾಂಡಿಂಗ್‌ ಪರೀಕ್ಷೆ ಯಶಸ್ವಿಯಾಗಿದೆ.

ಇಂದು ಬೆಳಗ್ಗೆ ಚಿತ್ರದುರ್ಗದ ಚಳ್ಳಕೆರೆಯಲ್ಲಿ ಡಿಆರ್‌ಡಿಒ ನಡೆಸಿದ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.

ಇಸ್ರೋದ ಸಾಧನೆಯು ಭಾರತದ ಬಾಹ್ಯಾಕಾಶ ಪ್ರವೇಶವನ್ನು ಮತ್ತಷ್ಟು ಸುಲಭಗೊಳಿಸುವುದಾಗಿದೆ. ಪುಪ್ಪಕ್ ಆರ್​ಎಲ್​ವಿ ಎಸ್ರೋದ ಮರುಬಳಕೆ ಲಾಂಚ್ ವೆಹಿಕಲ್ ಆಗಿದೆ. ಡಿಆರ್‌ಡಿಒ ಏರೋ ನಾಟಿಕಲ್ ಟೆಸ್ಟ್ ರೇಂಜ್ -2ನಲ್ಲಿ ನಡೆಸಿದ ಹಾರಾಟ ಯಶಸ್ವಿಯಾಗಿದೆ.

21ನೇ ಶತಮಾನದ ಪುಷ್ಪಕ ವಿಮಾನ ಎಂದು ಪ್ರಸಿದ್ಧಿಯಾಗಿರುವ ಪುಷ್ಪಕ್ ರಾಕೆಟ್ ಹಾರಾಟ ಇದಾಗಿದೆ. ಈ ಮೂಲಕ ಸ್ಪೇಸ್ ಶಿಪ್ ಪ್ರಯೋಗದಲ್ಲಿ ಇಸ್ರೋ ಮತ್ತೊಂದು ಸಾಧನೆ ಮಾಡಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕುದಾಪುರ ಬಳಿಯ DRDOನಲ್ಲಿ ಪರೀಕ್ಷಾರ್ಥ ಹಾರಾಟ ನಡೆಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!