ಅಕ್ರಮ‌ ವಿದ್ಯುತ್ ಸಂಪರ್ಕ ಪಡೆದ ವ್ಯಕಿಗಳ ವಿರುದ್ಧ ರೈತ ದೂರು

ಹೊಸದಿಗಂತ ವರದಿ ಹಾಸನ :

ಅನಧಿಕೃತವಾಗಿ ಕಂಬಗಳಿಂದ ನೇರವಾಗಿ ವಿದ್ಯುತ್‌ ಸಂಪರ್ಕ ಪಡೆದುಕೊಂಡಿರುವ ವ್ಯಕಿಗಳ ವಿರುದ್ಧ ಹಾಸನ ತಾಲೂಕಿನ ಕಡದರಹಳ್ಳಿ ಗ್ರಾಮದ ನಿಂಗಯ್ಯ ಚೆಸ್ಕಂ ಹಾಗೂ ಪೋಲಿಸರಿಗೆ ದೂರು ನೀಡಿದ್ದಾರೆ.

ಹಾಸನ ತಾಲೂಕಿನ ಕಡದರಹಳ್ಳಿ ಗ್ರಾಮದಲ್ಲಿ ನಿಂಗಯ್ಯ ಎಂಬುವವರು ಈ ದೂರನ್ನು ನೀಡಿದ್ದು, ಗಂಗಾ ಕಲ್ಯಾಣ ಇಲಾಖೆ ವತಿಯಿಂದ ನೀಡಿರುವ ಟಿಸಿಯ ಕಂಬಗಳಿಂದ ನೇರವಾಗಿ ಕಡದರಹಳ್ಳಿ ಗ್ರಾಮದ ಕೆಲವರು ಅನಾಧಿಕೃತವಾಗಿ ವಿದ್ಯುತ್‌ ಸಂಪರ್ಕ ಪಡೆದುಕೊಂಡಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮಕೈಗೊಳ್ಳಿ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ ನಿಂಗಯ್ಯ ದೂರು ನೀಡಿದ್ದಾರೆ.

ನನಗೆ ಗಂಗಾ ಕಲ್ಯಾಣ ಇಲಾಖೆವಯಿಂದ ಅಧಿಕೃತವಾಗಿ ಟಿಸಿ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಟ್ಟಿದ್ದಾರೆ. ಆ ವಿದ್ಯುತ್ ಸಂಪರ್ಕದಿಂದ ಕಾನೂನು ಉಲ್ಲಂಘಿಸಿ ಅನಾಧಿಕೃತವಾಗಿ ಮೂರು ಜನರು ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದಾರೆ. ಇವ ಅಕ್ರಮ ವಿದ್ಯುತ್ ಸಂರ್ಪಕದಿಂದ ನನ್ನ ಜಮೀನಿನಲ್ಲಿ ಅಳವಡಿಸಿಕೊಂಡಿರುವ ಪಂಪ್ ಸೆಟ್ ಮೋಟಾರ್ ಗೆ ವಿದ್ಯುತ್ ವ್ಯತ್ಯಾಸ ಉಂಟಾಗಿ ಅನೇಕ ಭಾರಿ ಸುಟ್ಟು ಹೋಗಿದೆ. ನಿಮ್ಮಿಂದ ನನಗೆ ಸಮಸ್ಯೆ ಆಗುತ್ತಿದೆ ಎಂದು ಅನಾಧಿಕೃತ ವಿದ್ಯುತ್ ಸಂಪರ್ಕ ಪಡಿದಿರುವವರಿಗೆ ಹೇಳಲು ಹೊದರೆ ಹಲ್ಲೆ ಮಾಡಲು ಮುಂದಾಗಿ ಧಮ್ಕಿ ಹಾಕುತ್ತಾರೆ. ಆದ್ದರಿಂದ ಅಕ್ರಮವಾಗಿ ವಿದ್ಯುತ್ ಬಳಕೆ ಮಾಡುತ್ತಿರುವವ ವಿರುದ್ಧ ಕ್ರಮಕೈಗೊಳ್ಳಿ ಎಂದು ನಿಂಗಯ್ಯ ಮನವಿ ಮಾಡಿದ್ದಾರೆ.

ಈ ಹಿಂದೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ ಸಹ ಈ ವಿಚಾರ ತಿಳಿಸಿದ್ದೇನೆ. ಲೈನ್ ಮೆನ್ ಗಳ ಗಮನಕ್ಕೆ ನೀಡಿದರೆ ಉಢಾಪೆ ಮಾತುಗಳ್ಳಾನಾಡುತ್ತಾರೆ‌. ಅನಾಧಿಕೃತ ವಿದ್ಯುತ್ ಸಂಪರ್ಕ ಪಡೆದಿರುವವರು ನನಗೆ ಕೊಲೆ ಬೆದರಿಕೆ ಕೂಡ ಹಾಕುತ್ತಿದ್ದಾರೆ.‌ ಅವರಿಂದ ನನಗೆ ರಕ್ಷಣೆ ಕೊಡಿ, ಎಂದು ನಿಂಗಯ್ಯ ಹಾಸನ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಚೇರಿಗೆ ದೂರನ್ನು ಸಹ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!