ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಮನ್ಸ್ ಪ್ರೀಮಿಯರ್ ಲೀಗ್ (WPL) 2026ರ ನಾಲ್ಕನೇ ಆವೃತ್ತಿ ಶುಕ್ರವಾರ ಅಂದ್ರೆ ನಾಳೆಯಿಂದ (ಜ.9) ಆರಂಭವಾಗುತ್ತಿದ್ದು, ಮಹಿಳಾ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆ ಉತ್ತುಂಗಕ್ಕೇರಿದೆ. ಐದು ತಂಡಗಳ ನಡುವಿನ ಈ ಟೂರ್ನಿಗೆ ಎಲ್ಲ ಫ್ರಾಂಚೈಸಿಗಳೂ ಸಜ್ಜಾಗಿದ್ದು, ಈ ಬಾರಿ ನಾಯಕತ್ವದಲ್ಲಿ ನಡೆದ ಬದಲಾವಣೆಗಳು ವಿಶೇಷ ಕುತೂಹಲ ಹುಟ್ಟುಹಾಕಿವೆ.
ಈ ಸೀಸನ್‌ನಲ್ಲಿ ಮೂರು ತಂಡಗಳು ಹೊಸ ನಾಯಕಿಯರ ನೇತೃತ್ವದಲ್ಲಿ ಕಣಕ್ಕಿಳಿಯುತ್ತಿವೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮೊದಲ ಬಾರಿಗೆ ಜೆಮಿಮಾ ರೋಡ್ರಿಗಸ್ ಮುನ್ನಡೆಸಲಿದ್ದು, ಯುವ ನಾಯಕತ್ವದತ್ತ ತಂಡ ವಿಶ್ವಾಸ ತೋರಿದೆ. ಯುಪಿ ವಾರಿಯರ್ಸ್ ತಂಡದ ಚುಕ್ಕಾಣಿ ಆಸ್ಟ್ರೇಲಿಯಾದ ಅನುಭವೀ ಆಟಗಾರ್ತಿ ಮೆಗ್ ಲ್ಯಾನಿಂಗ್ ಕೈಗೆ ಹೋಗಿದ್ದು, ಅವರ ಟೀಮ್ ಟೆಕ್ನಿಕ್ಸ್ ನಾಯಕತ್ವದ ಮೇಲೆ ಭಾರೀ ನಿರೀಕ್ಷೆ ಇದೆ. ಗುಜರಾತ್ ಜೈಂಟ್ಸ್ ತಂಡಕ್ಕೆ ಆಲ್‌ರೌಂಡರ್ ಆ್ಯಶ್ಲೀ ಗಾರ್ಡ್ನರ್ ನಾಯಕಿಯಾಗಿದ್ದು, ತಂಡಕ್ಕೆ ಹೊಸ ಉತ್ಸಾಹ ತುಂಬುವ ನಿರೀಕ್ಷೆಯಿದೆ.
ಇದನ್ನೂ ಓದಿ: Kitchen Tips | ಈ ಟಿಪ್ಸ್ ಫಾಲೋ ಮಾಡಿದ್ರೆ ಕೊತ್ತಂಬರಿ ಸೊಪ್ಪು ಒಂದು ತಿಂಗಳಾದ್ರು ಹಾಳಾಗಲ್ಲ!
ಇನ್ನು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸ್ಮೃತಿ ಮಂಧಾನ ಮುಂದುವರಿದು ಮುನ್ನಡೆಸುತ್ತಿದ್ದು, ಮುಂಬೈ ಇಂಡಿಯನ್ಸ್ ತಂಡದ ನಾಯಕಿಯಾಗಿ ಹರ್ಮನ್‌ಪ್ರೀತ್ ಕೌರ್ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಅನುಭವ ಮತ್ತು ಯುವಶಕ್ತಿಯ ಸಂಯೋಜನೆಯೊಂದಿಗೆ ಈ ಬಾರಿ WPL ರೋಚಕ ಪೈಪೋಟಿಗೆ ಸಾಕ್ಷಿಯಾಗಲಿದೆ.

