ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ನಲ್ಲಿ ಈಗಾಗಲೇ ಐದು ಪಂದ್ಯಗಳನ್ನು ಸೋತಿರುವ ಆರ್ಸಿಬಿಗೆ ಇದೀಗ ಅಳಿವು ಉಳಿವಿನ ಪರಿಸ್ಥಿತಿ ಬಂದಿದೆ.
ಆರ್ಸಿಬಿ ಇಂದು ಸನ್ರೈಸರ್ಸ್ ವಿರುದ್ಧ ನಡೆಯುವ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ.
ಗೆದ್ದರೆ ಪ್ಲೇ ಆಫ್ ಸೋತರೆ ಮನೆಗೆ ಎಂಬ ಪರಿಸ್ಥಿತಿಯಲ್ಲಿರುವ ಆರ್ಸಿಬಿ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೈದರಬಾದ್ ಸನ್ರೈಸರ್ಸ್ ವಿರುದ್ದ ಸೆಣೆಸಾಡಲಿದೆ. ಫಾಫ್ ಡು ಪೆಸ್ಲಿ ಸಾರಥ್ಯದಲ್ಲಿ ಆರ್ಸಿಬಿ ಆಡಿರುವ 6 ಪಂದ್ಯಗಳ ಪೈಕಿ 5 ಪಂದ್ಯದಲ್ಲಿ ಸೋಲನ್ನ ಅನುಭವಿಸಿದೆ.
ಇನ್ನು 5 ಪಂದ್ಯಗಳಲ್ಲಿ 3 ಪಂದ್ಯವನ್ನ ಗೆದ್ದ ಸನ್ರೈಸರ್ಸ್ ತನ್ನ ಬ್ಯಾಟರ್ಗಳ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದು , ಸನ್ ರೈಸರ್ಸ್ ಬ್ಯಾಟರ್ಗಳನ್ನು ಕಟ್ಟಿಹಾಕುವ ಸವಾಲು ಆರ್ಸಿಬಿ ಬೌಲರ್ಗಳ ಮುಂದಿದೆ.
ಕಾವಿಯ ಮಾರನ್ ಒಡೆತನದ ಹೈದರಾಬಾದ್ ತಂಡ ಈಗಾಗಲೇ ಐದು ಪಂದ್ಯ ಎದುರಿಸಿದ್ದು, 2 ಪಂದ್ಯ ಸೋತಿದೆ. ಆದರೂ ಸಹ ಪಾಯಿಂಟ್ ಟೇಬಲ್ನಲ್ಲಿ 4ನೇ ಸ್ಥಾನವನ್ನು ಪಡೆದುಕೊಂಡಿದೆ. ಅತ್ತ ಆರ್ಸಿಬಿ ಪಾಯಿಂಟ್ ಟೇಬಲ್ನಲ್ಲಿ ಕೊನೆಯ ಸ್ಥಾನದಲ್ಲಿದೆ. ಆರ್ಸಿಬಿ ಫ್ಯಾನ್ಸ್ ಎಲ್ಲರಿಗಿಂತ ಹೆಚ್ಚು ಲಾಯಲ್ ಫ್ಯಾನ್ ಬೇಸ್ ಎನಿಸಿಕೊಂಡಿದ್ದು, ಪ್ರತೀ ಪಂದ್ಯದಲ್ಲಿಯೂ ಚಿಯರ್ ಮಾಡುತ್ತಲೇ ಬಂದಿದ್ದಾರೆ.
ಈ ಪಂದ್ಯದಲ್ಲೂ ಕೂಡ ಫ್ಯಾನ್ಸ್ ಸಂಪೂರ್ಣ ಬೆಂಬಲ ನೀಡಲಿದ್ದು, ಇದು ಪ್ಲೇಯರ್ಸ್ ಮೇಲೆ ಇನ್ನಷ್ಟು ಒತ್ತಡ ನೀಡುವ ಸಾಧ್ಯತೆ ಇದೆ.