IPL | ಆರ್‌ಸಿಬಿಗೆ ಇಂದು Do or Die ಪಂದ್ಯ, ಫ್ಯಾನ್ಸ್‌ಗೆ ಫುಲ್‌ ಟೆನ್ಶನ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಐಪಿಎಲ್‌ನಲ್ಲಿ ಈಗಾಗಲೇ ಐದು ಪಂದ್ಯಗಳನ್ನು ಸೋತಿರುವ ಆರ್‌ಸಿಬಿಗೆ ಇದೀಗ ಅಳಿವು ಉಳಿವಿನ ಪರಿಸ್ಥಿತಿ ಬಂದಿದೆ.

ಆರ್‌ಸಿಬಿ ಇಂದು ಸನ್‌ರೈಸರ್ಸ್‌ ವಿರುದ್ಧ ನಡೆಯುವ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ.

ಗೆದ್ದರೆ ಪ್ಲೇ ಆಫ್​ ಸೋತರೆ ಮನೆಗೆ ಎಂಬ ಪರಿಸ್ಥಿತಿಯಲ್ಲಿರುವ ಆರ್​ಸಿಬಿ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೈದರಬಾದ್​​ ಸನ್​ರೈಸರ್ಸ್​ ವಿರುದ್ದ ಸೆಣೆಸಾಡಲಿದೆ. ಫಾಫ್​ ಡು ಪೆಸ್ಲಿ ಸಾರಥ್ಯದಲ್ಲಿ ಆರ್​ಸಿಬಿ ಆಡಿರುವ 6 ಪಂದ್ಯಗಳ ಪೈಕಿ 5 ಪಂದ್ಯದಲ್ಲಿ ಸೋಲನ್ನ ಅನುಭವಿಸಿದೆ.

ಇನ್ನು 5 ಪಂದ್ಯಗಳಲ್ಲಿ 3 ಪಂದ್ಯವನ್ನ ಗೆದ್ದ ಸನ್​ರೈಸರ್ಸ್​ ತನ್ನ ಬ್ಯಾಟರ್​ಗಳ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದು , ಸನ್​ ರೈಸರ್ಸ್​ ಬ್ಯಾಟರ್​ಗಳನ್ನು ಕಟ್ಟಿಹಾಕುವ ಸವಾಲು ಆರ್​ಸಿಬಿ ಬೌಲರ್​ಗಳ ಮುಂದಿದೆ.

ಕಾವಿಯ ಮಾರನ್​ ಒಡೆತನದ ಹೈದರಾಬಾದ್​ ತಂಡ ಈಗಾಗಲೇ ಐದು ಪಂದ್ಯ ಎದುರಿಸಿದ್ದು, 2 ಪಂದ್ಯ ಸೋತಿದೆ. ಆದರೂ ಸಹ ಪಾಯಿಂಟ್​ ಟೇಬಲ್​ನಲ್ಲಿ 4ನೇ ಸ್ಥಾನವನ್ನು ಪಡೆದುಕೊಂಡಿದೆ. ಅತ್ತ ಆರ್​ಸಿಬಿ ಪಾಯಿಂಟ್​​ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿದೆ. ಆರ್‌ಸಿಬಿ ಫ್ಯಾನ್ಸ್‌ ಎಲ್ಲರಿಗಿಂತ ಹೆಚ್ಚು ಲಾಯಲ್‌ ಫ್ಯಾನ್‌ ಬೇಸ್‌ ಎನಿಸಿಕೊಂಡಿದ್ದು, ಪ್ರತೀ ಪಂದ್ಯದಲ್ಲಿಯೂ ಚಿಯರ್‌ ಮಾಡುತ್ತಲೇ ಬಂದಿದ್ದಾರೆ.

ಈ ಪಂದ್ಯದಲ್ಲೂ ಕೂಡ ಫ್ಯಾನ್ಸ್‌ ಸಂಪೂರ್ಣ ಬೆಂಬಲ ನೀಡಲಿದ್ದು, ಇದು ಪ್ಲೇಯರ್ಸ್‌ ಮೇಲೆ ಇನ್ನಷ್ಟು ಒತ್ತಡ ನೀಡುವ ಸಾಧ್ಯತೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!