ಸೌಂದರ್ಯ ಜಗದೀಶ್‌ ನಿವಾಸದಲ್ಲೇ ಅಂತಿಮ ದರುಶನಕ್ಕೆ ವ್ಯವಸ್ಥೆ, ಮಧ್ಯಾಹ್ನ ಅಂತ್ಯಕ್ರಿಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿತ್ರರಂಗದ ಹೆಸರಾಂತ ನಿರ್ಮಾಪಕ ಸೌಂದರ್ಯ ಜಗದೀಶ್‌ ತಮ್ಮ ನಿವಾಸದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ತಮ್ಮ ನಿವಾಸದಲ್ಲಿಯೇ ಇಂದು ಅಂತಿಮ ದರುಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.

ಬೆಳಗ್ಗೆ 9:30 ಗಂಟೆಯ ನಂತರ ಚನ್ನರಾಯಪಟ್ಟಣದ ಹಿರಿಸಾವೆ ಬಳಿಯ ಫಾರಂ ಹೌಸ್‌ನಲ್ಲಿ ಸೌಂದರ್ಯ ಜಗದೀಶ್ ಅವರ  ಅಂತ್ಯಕ್ರಿಯೆ ನೆರವೇರಲಾಗುವುದು.

ನಟ ದರ್ಶನ್​ಗೆ ಸೌಂದರ್ಯ ಜಗದೀಶ್ ಆಪ್ತರಾಗಿದ್ದರು. ಅವರು ಕೂಡ ಆಗಮಿಸಿ ಅಂತಿಮ ದರ್ಶನ  ಪಡೆದಿದ್ದಾರೆ. ಈ ವೇಳೆ ನಟ ದರ್ಶನ್‌ ಅವರ ಕೈಯನ್ನು ಸೌಂದರ್ಯ ಜಗದೀಶ್‌ ಅವರ ಪತ್ನಿ ಹಿಡಿದುಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ದರ್ಶನ್‌ ಹಾಗೂ ಸೌಂದರ್ಯ ಜಗದೀಶ್‌ ಆಪ್ತರಾಗಿದ್ದರು. ಈಗಾಗಲೇ ಹಲವು ಸೆಲೆಬ್ರಿಟಿಗಳು ಅಂತಿಮ ದರುಶನ ಪಡೆದಿದ್ದು, ಇಂದು ಇನ್ನಷ್ಟು ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!