ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ನಿಸರ್ಗ ಹೊಟೇಲ್ನಲ್ಲಿ ಮತದಾನ ಮಾಡಿ ಬಂದವರಿಗೆ ಉಚಿತ ಮಸಾಲೆ ದೋಸೆ, ಲಡ್ಡು, ಕಾಫಿ ಟೀ ನೀಡಲಾಗುತ್ತಿದೆ.
ಇದರಿಂದಾಗಿ ಹೊಟೇಲ್ನಲ್ಲಿ ಮತದಾನಕ್ಕೆ ನಿಂತಷ್ಟೇ ಕ್ಯೂ ಇದೆ. ಹೋಟೆಲ್ನಲ್ಲಿ ಜನಸಾಗರವೇ ಹರಿದುಬಂದಿದೆ. ನಗರದ 20ಕ್ಕೂ ಹೆಚ್ಚು ಹೋಟೆಲ್ ಗಳಲ್ಲಿ ಮತದಾನ ಮಾಡಿಬಂದವರಿಗೆ ಉಚಿತ ತಿಂಡಿ ನೀಡಲಾಗ್ತಿದೆ. ಇದರ ಸದುಪಯೋಗವನ್ನು ಮತದಾರ ಮಾಡಿಕೊಳ್ತಿದ್ದಾನೆ.