30 ವರ್ಷದಿಂದ ವೋಟ್‌ ಹಾಕ್ತಿದ್ದೀನಿ, ಈಗ ಲಿಸ್ಟ್‌ ಅಲ್ಲಿ ಹೆಸರಿಲ್ಲ ಅಂದ್ರೆ? ಮತದಾರ ಗರಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಳೆದ 30 ವರ್ಷಗಳಿಂದ ನಾನು ಮತ ಚಲಾಯಿಸ್ತಾ ಇದ್ದೀನಿ, ಈಗ ಲಿಸ್ಟ್‌ನಲ್ಲಿ ಹೆಸರಿಲ್ಲ ಎಂದು ವೋಟ್‌ ಮಾಡೋಕೆ ಬಿಡ್ತಿಲ್ಲ ಎಂದು ಆರ್ ಟಿ ನಗರದ ನಿವಾಸಿ ವಸೀಮುಲ್ಲಾ ಖಾನ್ ಗರಂ ಆಗಿದ್ದಾರೆ.

ಆರ್ ಟಿ ನಗರದ ಪ್ರೆಸಿಡೆನ್ಸಿ ಶಾಲೆಯಲ್ಲೇ ವೋಟ್ ಹಾಕ್ತಾ ಇದೀನಿ. ಕಳೆದ 2013 ರ ಚುನಾವಣೆಯಲ್ಲಿಯೂ ಸಹ ವೋಟ್ ಹಾಕಿದ್ದೀನಿ. ಇಡೀ ನನ್ನ ಕುಟುಂಬದವರ ವೋಟ್ ಇದೆ. ಆದ್ರೆ ಲೀಸ್ಟ್ ನಲ್ಲಿ ನನ್ನ ಹೆಸರು ಮಾತ್ರ ಇಲ್ಲ. ಕೇಳಿದ್ರೆ ನಮಗೇನು ಗೊತ್ತಿಲ್ಲ‌ ಅಂತಾರೆ. ಸಂಜೆ 6 ಗಂಟೆ ಒಳಗಡೆ ಸಮಸ್ಯೆ ಬಗೆಹರಿಸಿ, ನನ್ನ ಮತ ಚಲಾಯಿಸಲು ಅವಕಾಶ ಮಾಡಿಕೊಡಿ  ಎಂದು ಖಾನ್‌ ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!