ಹೊಸದಿಗಂತ ಡಿಜಿಟಲ್ ಡೆಸ್ಕ್:
ಇದುವರೆಗೆ ಕಂಡುಕೇಳರಿಯದ ತಾಪಮಾನಕ್ಕೆ ಕೇರಳ ಬಳಲಿ ಬೆಂಡಾಗುತ್ತಿರುವ ನಡುವೆಯೇ ವಾತಾವರಣ ಇನ್ನಷ್ಟು ಬಿಸಿಯಾಗಲಿದೆ ಎಂಬ ಚ್ಚರಿಕೆಯನ್ನು ಹವಾಮಾನ ಇಆಲಖೆ ನೀಡಿದೆ.
ರಾಜ್ಯದ ಪಾಲಕ್ಕಾಡ್, ಕೋಝಿಕ್ಕೋಡ್ ಹಾಗೂ ತಿರುವನಂತಪುರಂನಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆಯಿದೆ, ನಾಗರಿಕರು ಎಚ್ಚರಿಕೆಯಿಂದ ಇರಬೇಕು ಎಂದಿರುವ ಇಲಾಖೆ, ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ.
ಪಾಲಕ್ಕಾಡ್ ಜಿಲ್ಲೆಯಲ್ಲಿ 40, ಕೊಲ್ಲಂ, ಕೋಝಿಕ್ಕೋಡ್ಗಳಲ್ಲಿ 39, ತ್ರಿಶೂರ್ನಲ್ಲಿ 38, ಅಲಪ್ಪುಳ, ಕೊಟ್ಟಾಯಂ, ಪತ್ತನಂತಿಟ್ಟ ಮತ್ತು ಕಣ್ಣೂರುಗಳಲ್ಲಿ 37, ತಿರುವನಂತಪುರಂ, ಎರ್ನಾಕುಳಂ, ಮಲಪ್ಪುರಂ, ಕಾಸರಗೋಡು ಜಿಲ್ಲೆಗಳಲ್ಲಿ 36ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.